ಮಾಜಿ ಸೇನಾ ಮುಖ್ಯಸ್ಥ ಜನರಲ್ ಕೆ ವಿ ಕೃಷ್ಣ ರಾವ್ ವಿಧಿವಶ

1971 ರಲ್ಲಿ ಬಾಂಗ್ಲಾದೇಶ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕೆ ವಿ ಕೃಷ್ಣ ರಾವ್( 92 ) ವಿಧಿವಶರಾಗಿದ್ದಾರೆ.
ಕೆ ವಿ ಕೃಷ್ಣ ರಾವ್ ವಿಧಿವಶ
ಕೆ ವಿ ಕೃಷ್ಣ ರಾವ್ ವಿಧಿವಶ

ನವದೆಹಲಿ: 1971 ರಲ್ಲಿ ಬಾಂಗ್ಲಾದೇಶ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕೆ ವಿ ಕೃಷ್ಣ ರಾವ್( 92 ) ವಿಧಿವಶರಾಗಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗಿದ್ದ ಸಂದರ್ಭದಲ್ಲಿ  ಕೃಷ್ಣರಾವ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಸಹ ಕಾರ್ಯನಿರ್ವಹಿಸಿದ್ದರು. 1942 ರಲ್ಲಿ ಸೇನೆಗೆ ಸೇರಿದ್ದ ಕೃಷ್ಣ ರಾವ್ 4 ದಶಕಗಳ ಕಾಲ ಸೇನೆಯಲ್ಲಿದ್ದು  ಭಾರತೀಯ ಸೇನೆಯ 14 ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಎರಡನೇ ಮಹಾಯುದ್ಧದ ವೇಳೆ ಬರ್ಮಾ, ನಾರ್ತ್ ವೆಸ್ಟ್ ಫ್ರಾಂಟಿಯರ್, ಬಲೂಚಿಸ್ತಾನದಲ್ಲೂ ಕೃಷ್ಣಾ ರಾವ್ ಸೇವೆ ಸಲ್ಲಿಸಿದ್ದರು. ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಕೃಷ್ಣ ರಾವ್ 1949 -51 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡಮಿಯನ್ನು ಸ್ಥಾಪಿಸಿ ಮಾರ್ಗದರ್ಶಕರಾಗಿದ್ದರು. ಕೃಷ್ಣರಾವ್ ಅವರ ನಿಧನಕ್ಕೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ  ಓಮರ್  ಅಬ್ದುಲ್ಲ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com