ಪಾಕಿಸ್ತಾನದ ವಿರುದ್ಧ ದೊಡ್ಡ ಯುದ್ಧಕ್ಕೆ ಅಮೆರಿಕಾ ಮತ್ತು ಭಾರತ ಜಂಟಿ ಸಜ್ಜು: ಹಫೀಜ್ ಸಯೀದ್

ಲಾಹೋರ್ ನಗರದಲ್ಲಿ ಈದ್ ಉಲ್-ಫಿತ್ರ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಜೆಯುಡಿ ಉಗ್ರ ಸಂಘಟನೆಯ ಅಧ್ಯಕ್ಷ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್ ಸಯೀದ್
ಜೆಯುಡಿ ಉಗ್ರ ಸಂಘಟನೆಯ ಅಧ್ಯಕ್ಷ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್ ಸಯೀದ್
ಜೆಯುಡಿ ಉಗ್ರ ಸಂಘಟನೆಯ ಅಧ್ಯಕ್ಷ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್ ಸಯೀದ್
ಲಾಹೋರ್: ಲಾಹೋರ್ ನಗರದಲ್ಲಿ ಈದ್ ಉಲ್-ಫಿತ್ರ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಜೆಯುಡಿ ಉಗ್ರ ಸಂಘಟನೆಯ ಅಧ್ಯಕ್ಷ ಮತ್ತು ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಜ್ ಸಯೀದ್ ವಿಕಾರ ಭಯವನ್ನು ಪೂಜಿಸಲು ಮುಂದಾಗಿದ್ದು, ಪಾಕಿಸ್ತಾನದ ವಿರುದ್ಧ ಅಮೆರಿಕಾ ಮತ್ತು ಭಾರತ ಒಪ್ಪಂದ ಮಾಡಿಕೊಂಡು ದೊಡ್ಡ ಯುದ್ಧಕ್ಕೆ ಸಜ್ಜಾಗುತ್ತಿವೆ ಎಂದಿದ್ದಾರೆ. 
ಗಡ್ಡಾಫಿ ಮೈದಾನದಲ್ಲಿ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ ಲಷ್ಕರ್-ಎ-ತೈಬಾ ಸಂಸ್ಥಾಪಕ ಈ ಒಪ್ಪಂದವನ್ನು ವಿಫಲಗೊಳಿಸಲು ಮುಸ್ಲಿಂ ಸಮುದಾಯ ಒಂದಾಗಬೇಕು ಎಂದು ಕರೆ ನೀಡಿದ್ದಾರೆ. 
ಪಾಕಿಸ್ತಾನ ಅಣು ಶಸ್ತ್ರಾಸ್ತ್ರ ಯೋಜನೆಯ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ಪಿತೂರಿ ನಡೆಸಿವೆ ಎಂದಿರುವ ಅವರು "ಪಾಕಿಸ್ತಾನದ ವಿರುದ್ಧ ಅಮೆರಿಕಾ ಮತ್ತು ಭಾರತ ಒಪ್ಪಂದ ಮಾಡಿಕೊಂಡು ದೊಡ್ಡ ಯುದ್ಧಕ್ಕೆ ಸಿದ್ಧತೆ ನಡೆಯುತ್ತಿದೆ" ಎಂದು ಕೂಡ ಹೇಳಿದ್ದು "ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಡ್ರೋನ್ ಗಳನ್ನು ನಿಲ್ಲಿಸಿದ್ದು, ನಮ್ಮ ನೇತಾರರು ವಿರೋಧಿಗಳ ಜೊತೆ ಕಾದಾಟದಲ್ಲಿ ನಿರತರಾಗಿದ್ದಾರೆ" ಎಂದಿದ್ದಾರೆ ಹಫೀಜ್ 
ಅಮೆರಿಕಾ ಸಯೀದ್ ತಲೆದಂಡಕ್ಕೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಅಮೆರಿಕಾದಿಂದ ದೂರವಾಗುತ್ತಿರುವುದು ಒಂದು ರೀತಿ ಒಳ್ಳೆಯದೇ ಎಂದಿದ್ದಾರೆ ಸಯೀದ್. 
"ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಅಮೆರಿಕಾದಿಂದ ದೂರವಾಗುತ್ತಿರುವುದು ಇವೊತ್ತಿಗೆ ಸರಿಯಲ್ಲ ಎಂದು ಕಾಣಿಸಿದರು ಮುಂದಿನ ದಿನಗಳಲ್ಲಿ ಅದು ಒಳ್ಳೆಯದೇ. ಇದು ಇಸ್ಲಾಮಿಕ್ ಜಗತ್ತಿನ ಒಗ್ಗೂಡುವಿಕೆಗೆ ತಳಪಾಯ ಹಾಕುತ್ತದೆ ಮತ್ತು ಈ ಕ್ಷಣದ ಅವಶ್ಯಕತೆ ಇಸ್ಲಾಮಿಕ್ ವಿಶ್ವ" ಎಂದು ಹಫೀಜ್ ಹೇಳಿದ್ದಾರೆ. 
ಸೌದಿ ಅರೇಬಿಯಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಹಫೀಜ್ ಮುಸ್ಲಿಂ ಜಗತ್ತನ್ನು ಅಸ್ಥಿರಗೊಳಿಸಲು ವಿದೇಶಿರ ಕೈವಾಡ ಇದೆ ಎಂದಿದ್ದಾರೆ. 
ಮೈದಾನದ ಹೊರಗೆ ಪೊಲೀಸ್ ಸಿಬ್ಬಂದಿ ಮತ್ತು ಜೆಯುಡಿ ಸಿಬ್ಬಂದಿ ಒದಗಿಸಿದ ಬಿಗಿ ಭದ್ರತೆಯ ನಡುವೆ ದೊಡ್ಡ ಸಂಖ್ಯೆಯಲ್ಲಿ ಜನ ಸಯೀದ್ ಜೊತೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದಾರೆ. 
ಸಯೀದ್ ಹಲವಾರು ವರ್ಷಗಳಿಂದ ಗಡ್ಡಾಫಿ ಮೈದಾನದಲ್ಲಿ ಈದ್ ಪ್ರಾರ್ಥನೆ ಸಲ್ಲಿಸುತ್ತಿರುವುದು ವಾಡಿಕೆಯಾಗಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿಯನ್ನು ಕಟಕಟೆಗೆ ತರಲು ಭಾರತ ಪಾಕಿಸ್ತಾನಕ್ಕೆ ಆಗ್ರಹಿಸುತ್ತಲೇ ಬಂದಿದೆ. 
ಪಾಕಿಸ್ತಾನದಲ್ಲಿ ಸಯೀದ್ ಭಾರತ ವಿರೋಧಿ ರ್ಯಾಲಿಯಗಳನ್ನು ಆಯೋಜಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಜಮಾತ್-ಉದ್-ದಾವಾ ಅಧ್ಯಕ್ಷನ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಇಸ್ಲಾಮಾಬಾದ್ ಭಾರತದ ಮನವಿಯನ್ನು ತಿರಸ್ಕರಿಸುತ್ತಲೇ ಬಂದಿದೆ. ನವೆಂಬರ್ 2008 ರಲ್ಲಿ ಮುಂಬೈನಲ್ಲಿ ಎಲ್ ಲಿ ಟಿ ನಡೆಸಿದ ಈ ದಾಳಿಯಲ್ಲಿ 166 ಜನ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com