ಕಾಶ್ಮೀರದ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆಯಲು ಕೇಂದ್ರಕ್ಕೆ ಆಗ್ರಹಿಸಿದ ಓವೈಸಿ

ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸೆಯ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯಲು ಕೇಂದ್ರಕ್ಕೆ ಎಂ ಐ ಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರ ಆಗ್ರಹಿಸಿದ್ದಾರೆ.
ಎಂ ಐ ಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಎಂ ಐ ಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
ಹೈದರಾಬಾದ್: ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸೆಯ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯಲು ಕೇಂದ್ರಕ್ಕೆ ಎಂ ಐ ಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಂಗಳವಾರ ಆಗ್ರಹಿಸಿದ್ದಾರೆ. 
32 ಜನರು ಮೃತಪಟ್ಟಿದ್ದು, ಈ ಹಿಂಸೆಯ ಚಕ್ರವನ್ನು ಕೊನೆಗಾಣಿಸುವುದು ಹೇಗೆ ಮತ್ತು ಅಲ್ಲಿನ ನಿವಾಸಿಗಳ ತೊಂದರೆಗೆ ಮಿಡಿಯುವ ಹೃದಯವನ್ನು ಪ್ರದರ್ಶಿಸುವುದರ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯಬೇಕೆಂದು ಹೈದರಾಬಾದ್ ಸಂಸದ ಹೇಳಿದ್ದಾರೆ. 
ಹಿಜಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಅವರನ್ನು ಭದ್ರತಾ ಪಡೆಗಳು ಹತ್ಯೆಗೈದಾಗಿಲಿಂದಲೂ ಕಣಿವೆಯಲ್ಲೂ ಉದ್ವಿಗ್ನತೆ ಏರ್ಪಟ್ಟಿದೆ. 
ಸರಣಿ ಟ್ವೀಟ್ ಮಾಡಿರುವ ಓವೈಸಿ "ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳನ್ನು ಪ್ರತ್ಯೇಕಿಸುವ ಬೆಳವಣಿಗೆಯನ್ನು ಪ್ರಾರಂಭಿಸಿದ್ದ ವಾಜಪೇಯಿ ಸರ್ಕಾರದ ಯೋಜನೆಯನ್ನು ಮೋದಿ ಸರ್ಕಾರ ನಿಲ್ಲಿಸಿದ್ದೇಕೆ" ಎಂದು ಕೂಡ ಅವರು ಕೇಳಿದ್ದಾರೆ. 
ಭಾರತ ಆಂತರಿಕ ವ್ಯವಹಾರಗಳಲ್ಲಿ ತಲೆ ಹಾಕಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದಿರುವ ಓವೈಸಿ "ಅವರು ತಮ್ಮ ಆತ್ಮಜಿಜ್ಞಾಸೆಯಲ್ಲಿ ತೊಡಗಲಿ" ಎಂದು ಕೂಡ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com