ತಾಲಿಬಾನಿನಂತೆ ಜಾತಿ ಪದ್ಧತಿ; ಚರ್ಚಿಸುವ ಅವಶ್ಯಕತೆ ಇದೆ: ಶರದ್ ಯಾದವ್
ಸ್ವಾತಂತ್ರ ಬಂದಾಗಿಲಿಂದಲೂ ದಲಿತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಲೇ ಇದ್ದು, ಭಾರತದಲ್ಲಿ ಜಾತಿ ಪದ್ಧತಿ 'ತಾಲಿಬಾನ್ ರೀತಿಯದ್ದು' ಎಂದಿದ್ದಾರೆ ಜನತಾದಳ ಸಂಯುಕ್ತ ಪಕ್ಷದ ನಾಯಕ ಶರದ್ ಯಾದವ್
ನವದೆಹಲಿ: ಸ್ವಾತಂತ್ರ ಬಂದಾಗಿಲಿಂದಲೂ ದಲಿತರ ವಿರುದ್ಧ ದೌರ್ಜನ್ಯ ಹೆಚ್ಚುತ್ತಲೇ ಇದ್ದು, ಭಾರತದಲ್ಲಿ ಜಾತಿ ಪದ್ಧತಿ 'ತಾಲಿಬಾನ್ ರೀತಿಯದ್ದು' ಎಂದಿದ್ದಾರೆ ಜನತಾದಳ ಸಂಯುಕ್ತ ಪಕ್ಷದ ನಾಯಕ ಶರದ್ ಯಾದವ್. ಅವರು ರಾಜ್ಯಸಭೆಯಲ್ಲಿ ಗುರುವಾರ ಮಾತನಾಡುತ್ತಿದ್ದರು.
ಗೋರಕ್ಷಕ ಸಮಿತಿಯ ಮೇಲೆ ನಿಷೇಧ ಹೇರುವಂತೆ ಕೂಡ ಯಾದವ್ ಆಗ್ರಹಿಸಿದ್ದಾರೆ. ಗುಜರಾತ್ ನ ಉನಾ ಪಟ್ಟಣದಲ್ಲಿ ಸತ್ತ ಹಸುವಿನ ಚರ್ಮ ಸಾಗಿಸುತ್ತಿದ್ದ ನಾಲ್ವರು ದಲಿತ ಯುವಕರನ್ನು ಥಳಿಸಿ ದೌರ್ಜನ್ಯವೆಸಗಿದ ಹಿನ್ನಲೆಯಲ್ಲಿ ಯಾದವ್ ಈ ಹೇಳಿಕೆ ನೀಡಿದ್ದಾರೆ.
"ನಾವು ತಾಲಿಬಾನ್ ಬಗ್ಗೆ ಮಾತನಾಡುತ್ತೇವೆ... ನಮ್ಮ ಜಾತಿ ಪದ್ಧತಿಯು ತಾಲಿಬಾನ್ ನಂತೆಯೇ. ಅದನ್ನು ನಾವು ಚರ್ಚಿಸಬೇಕು" ಎಂದು ಈ ಪ್ರಕರಣದ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚಿಸುವಾಗ ಯಾದವ್ ಹೇಳಿದ್ದಾರೆ.
ಹಾಗೆಯೇ ಗೋರಕ್ಷಕರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಯಾದವ್ "ಯಾವುದಿದು ಗೋರಕ್ಷಕ ಸಮಿತಿ? ಸರ್ಕಾರ ಇದನ್ನು ನಿಷೇಧಿಸುವುದಿಲ್ಲವೇಕೆ?" ಎಂದು ಜೆಡಿಯು ನಾಯಕ ಕೇಳಿದ್ದಾರೆ.