ದಲಿತರ ಮೇಲೆ ಗೋ ರಕ್ಷಕರ ದೌರ್ಜನ್ಯ
ದಲಿತರ ಮೇಲೆ ಗೋ ರಕ್ಷಕರ ದೌರ್ಜನ್ಯ

'ಗೋರಕ್ಷಣೆ' ಮುಖ್ಯ ಜೊತೆಗೆ 'ಮಾನವ ರಕ್ಷಣೆ'ಯೂ: ದಲಿತ ದೌರ್ಜನ್ಯದ ಬಗ್ಗೆ ಕೇಂದ್ರ ಸಚಿವ ಪ್ರತಿಕ್ರಿಯೆ

ಸತ್ತ ಹಸುವಿನ ಚರ್ಮವೂ ಸಾಗಾಣೆ ಮಾಡುತ್ತಿದ್ದ ದಲಿತರ ಮೇಲೆ ಗೋ ರಕ್ಷಕರು ದೌರ್ಜನ್ಯ ನಡೆಸಿದ ಗುಜರಾತಿನ ಉನಾ ಘಟನೆಯನ್ನು ಖಂಡಿಸಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
Published on
ನವದೆಹಲಿ: ಸತ್ತ ಹಸುವಿನ ಚರ್ಮವೂ ಸಾಗಾಣೆ ಮಾಡುತ್ತಿದ್ದ ದಲಿತರ ಮೇಲೆ ಗೋ ರಕ್ಷಕರು ದೌರ್ಜನ್ಯ ನಡೆಸಿದ ಗುಜರಾತಿನ ಉನಾ ಘಟನೆಯನ್ನು ಖಂಡಿಸಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್ ಅಥವಾಲೆ, ಗೋರಕ್ಷಣೆ ಮುಖ್ಯ ಆದರೆ ಮನುಷ್ಯರನ್ನು ಬಲಿ ಕೊಟ್ಟಲ್ಲ ಎಂದಿದ್ದಾರೆ. 
"ಇದು ನಾನು ಸರ್ಕಾರಕ್ಕೆ ನೀಡುತ್ತಿರುವ ಹೇಳಿಕೆಯಲ್ಲ ಆದರೆ ಗೋ ರಕ್ಷಕರಿಗೆ ಹೇಳುತ್ತಿರುವ ಮಾತು. ಅವರಿಗೆ ನಾನು ಆಗ್ರಹಿಸುವುದೇನೆಂದರೆ, ಹಿಂದೂ ಧರ್ಮದಲ್ಲಿ ಹಸುವಿಗೆ ಗೌರವ ಸ್ಥಾನವಿದೆ ಆದರೆ ಅವುಗಳ ರಕ್ಷಣೆ ಮನುಷ್ಯರನ್ನು ಬಲಿ ಕೊಟ್ಟು ನಡೆಯಬಾರದು. ಕಾನೂನು ಉಲ್ಲಂಘಿಸಿ ಯಾರಾದರೂ ಹಸುವನ್ನು ಕೊಂದರೆ ಅದನ್ನು ವಿರೋಧಿಸಬೇಕು ಆದರೆ ಯಾವುದೇ ಮನುಷ್ಯನನ್ನು ಕೊಲ್ಲಬಾರದು" ಎಂದು ಅವರು ಹೇಳಿದ್ದಾರೆ. 
"ಗೋ ರಕ್ಷಣೆ ಮುಖ್ಯ ಜೊತೆಗೆ ಮಾನವ ರಕ್ಷಣೆಯೂ. ಇದಕ್ಕಾಗಿ ದಲಿತರು ಮತ್ತು ಹಿಂದೂಗಳ ನಡುವೆಯಾಗಲಿ ಅಥವಾ ಮುಸ್ಲಿಮರು ಮತ್ತು ಹಿಂದೂಗಳ ನಡುವೆಯಾಗಲಿ ಯಾವುದೇ ರೀತಿಯ ಗುದ್ದಾಟ ಅವಶ್ಯಕತೆ ಇಲ್ಲ. ನಮ್ಮ ಸಮಾಜವನ್ನು ಬಲಪಡಿಸಲು ನಾವೆಲ್ಲಾ ಪ್ರಯತ್ನಿಸಬೇಕು. ಉನಾದಲ್ಲಿ ನಡೆದಂತಹ ಘಟನೆಗಳು ಇನ್ನುಮುಂದೆ ನಡೆಯದಂತೆ ನಾವು ಜಾಗ್ರತೆ ವಹಿಸಬೇಕು " ಎನ್ನುದು ಅವರು ತಿಳಿಸಿದ್ದಾರೆ.
ಈ ಘಟನೆಯ ನಂತರ ನಡೆದ ದಲಿತರ ಪ್ರತಿಭಟನೆಯಲ್ಲಿ ನಡೆದ ಗುಂಪು ಘರ್ಷಣೆಯಿಂದ ಜುಲೈ 19 ರಂದು ಪೊಲಿಸ್ ಪೇದೆಯೊಬ್ಬರು ಮೃತಪಟ್ಟಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com