ಸಿಎಂ ಕಾರಿನಿಂದ ಕದಲದ ಕಾಗೆ, ಸಿದ್ದುಗೆ ಶನಿ ಕಾಟವೆ?

ರಾಜ್ಯಾದ್ಯಂತ ಸರ್ಕಾರಿ ನೌಕರರು ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ...
ಸಿಎಂ ಕಾರಿನ ಮೇಲೆ ಕಾಗೆ
ಸಿಎಂ ಕಾರಿನ ಮೇಲೆ ಕಾಗೆ
ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ನೌಕರರು ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನಿ ಮೇಲೆ ಕುಳಿತ ಕಾಗೆಯೊಂದನ್ನು ಸಿಬ್ಬಂದಿ ಓಡಿಸಲು ಯತ್ನಿಸಿದರು ಕದಲದೆ ಇದ್ದ ಘಟನೆ ಗುರುವಾರ ಸಿಎಂ ಅಧಿಕೃತ ನಿವಾಸ ಕೃಷ್ಣದಲ್ಲಿ ನಡೆದಿದೆ.
ಈ ಘಟನೆ ಸಿಎಂ ಸಿದ್ದರಾಮಯ್ಯ ಅವರಿಗೆ ಅಪಶಕುನ ಎಂದು ಕೆಲವು ಹೇಳಿದರೆ, ಇನ್ನು ಕೆಲವರು ಇದು ಕಾಕತಾಳೀಯ ಎಂದಿದ್ದಾರೆ.
ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಸಿಎಂ ನಿಗದಿತ ಕಾರ್ಯಕ್ರಮಕ್ಕೆ ತೆರಳಲು ತಮ್ಮ ಅಧಿಕೃತ ನಿವಾಸ ಕೃಷ್ಣದಿಂದ ಹೊರಬಂದಾಗ ಕಾಗೆಯೊಂದು ಕಾರಿನ ಮೇಲೆ ಕುಳಿತಿದ್ದು, ಈ ವೇಳೆ ಭದ್ರತಾ ಸಿಬ್ಬಂದಿ ಕಾಗೆಯನ್ನು ಓಡಿಸಲು ಪ್ರಯತ್ನಿಸಿದ್ದರು. ಅದರೆ ಕಾಗೆ ಮಾತ್ರ ಕದಲಲಿಲ್ಲ. ಈ ವೇಳೆ ವಿಚಲಿತರಾದ ಸಿಎಂ 10 ನಿಮಿಷಗಳ ಕಾದು ನಂತರ ಕಾರಿನಲ್ಲಿ ತೆರಳಿದ್ದಾರೆ.
ಶಾಸ್ತ್ರವನ್ನು ಪರಿಗಣಿಸಿದರೆ ಕಾಗೆ ಶನೀಶ್ವರ ದೇವರ ವಾಹನ ,ಹಿಂದೂ ಧಾರ್ಮಿಕ ಪದ್ದತಿಯಂತೆ ಕಾಗೆಯಲ್ಲಿ ಒಳ್ಳೆಯ ಶಕ್ತಿ ಇದೆ ಎಂದು ತಿಳಿದವರು ಇದ್ದಾರೆ.  ಕಾಗೆಯ ಮೇಲೆ ನಂಬಿಕೆಗಳು ಬಹಳ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com