ಜಮ್ಮು ಕಾಶ್ಮೀರದ ಶಸ್ತ್ರಾಸ್ತ್ರ ಉಗ್ರಾಣ ಸುರಕ್ಷಿತ ಎಂದ ಸೇನೆ

ಇತ್ತಿಚೆಗಷ್ಟೇ ನಡೆಸಿರುವ ಆಡಿಟ್ ಪ್ರಕಾರ ಜಮ್ಮು ಕಾಶ್ಮೀರದಲ್ಲಿರುವ ಎಲ್ಲ ಶಸ್ತ್ರಾಸ್ತ್ರ ಉಗ್ರಾಣಗಳು ಸುರಕ್ಷಿತವಾಗಿವೆ ಎಂದು ಸೇನೆ ಭಾನುವಾರ ತಿಳಿಸಿದೆ.
ಮಹಾರಾಷ್ಟ್ರದ ಪುಲ್ಗಾಂವ್ ನ ಸೇನೆಯ ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಘಟಿಸಿದ ಬೆಂಕಿ ಅವಘಡದ ಚಿತ್ರ
ಮಹಾರಾಷ್ಟ್ರದ ಪುಲ್ಗಾಂವ್ ನ ಸೇನೆಯ ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಘಟಿಸಿದ ಬೆಂಕಿ ಅವಘಡದ ಚಿತ್ರ

ಜಮ್ಮು: ಇತ್ತಿಚೆಗಷ್ಟೇ ನಡೆಸಿರುವ ಆಡಿಟ್ ಪ್ರಕಾರ ಜಮ್ಮು ಕಾಶ್ಮೀರದಲ್ಲಿರುವ ಎಲ್ಲ ಶಸ್ತ್ರಾಸ್ತ್ರ ಉಗ್ರಾಣಗಳು ಸುರಕ್ಷಿತವಾಗಿವೆ ಎಂದು ಸೇನೆ ಭಾನುವಾರ ತಿಳಿಸಿದೆ.

ರಾಜ್ಯದಲ್ಲಿ ಶಸ್ತ್ರಾಸ್ತ್ರ ದಾಸ್ತಾನುಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಪ್ರಶ್ನೆಗಳು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಸೇನೆಯ ವಕ್ತಾರ ಕಲ್ನಲ್ ಎಸ್ ಡಿ ಗೋಸ್ವಾಮಿ "ಜಮ್ಮು ಕಾಸ್ಮೀರದಲ್ಲಿರುವ ಸೇನಾ ಶಸ್ತ್ರಾಸ್ತ್ರ ದಾಸ್ತಾನುಗಳ ಸುರಕ್ಷಿತತೆಯ ಬಗ್ಗೆ ಸೇನೆಗೆ ಸೂಕ್ಷ್ಮತೆ ಇದೆ.

"ಸುರಕ್ಷತೆಯನ್ನು ತಿಳಿಯಲು ನಿರಂತರ ಆಡಿಟ್ ಗಳನ್ನು ನಡೆಸಲಾಗಿದೆ ಮತ್ತು ಇತ್ತೀಚೆಗಷ್ಟೇ ಜೂನ್ ೨ ೨೦೧೬ ರಂದು ಕೂಡ ನಾವು ಪರಿಶೀಲನೆ ನಡೆಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

"ಸೇನೆಯ ಅಗತ್ಯ ಬೆಂಕಿ ಅವಘಡ ನಿರ್ವಹಣಾ ಉಪಕರಣಗಳಲ್ಲಿ ತೊಂದರೆ ಇದೆ ಎಂದು ಕೆಲವು ಮಾಧ್ಯಮಗಳು ಪ್ರಶ್ನಿಸಿದ್ದವು" ಎಂದು ಕಲ್ನಲ್ ಗೋಸ್ವಾಮಿ ಹೇಳಿದ್ದಾರೆ.

"ಬೆಂಕಿ ನಿರ್ವಹಣಾ ಉಪಕರಣಗಳು ಅಗತ್ಯದಷ್ಟು ಇವೆ. ಅಲ್ಲದೆ ಸುರಕ್ಷಿತಾ ದೃಷ್ಟಿಯಿಂದ ಸಮಯಕ್ಕೆ ಸರಿಯಾಗಿ ಅವುಗಳನ್ನು ನವೀಕರಿಸಲಾಗುತ್ತಿದೆ ಮತ್ತು ಸಿಬ್ಬಂದಿಗಳು ಕೂಡ ಸದಾ ಸನ್ನದ್ಧರಾಗಿದ್ದಾರೆ" ಎಂದು ಕೂಡ ಅವರು ಹೇಳಿದ್ದಾರೆ.

"ಈ ಶಸ್ತ್ರಾಸ್ತ್ರ ದಾಸ್ತಾನುಗಳ ಬಳಿ ವಾಸಿಸುವ ನಾಗರಿಕರ ಸುರಕ್ಷತೆಗೆ ಸೇನೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭದ್ರತೆಯ ದೃಷ್ಟಿಯಿಂದ ಅತ್ಯುನ್ನತ ಮಾನದಂಡಗಳನ್ನು ಸೇನೆ ಅನುಸರಿಸುತ್ತದೆ" ಎಂದು ಕೂಡ ಕಲ್ನಲ್ ಹೇಳಿದ್ದಾರೆ.

ಮೇ ೩೧ರಂದು ಮಹಾರಾಷ್ಟ್ರದ ಪುಲ್ಗಾಂವ್ ನಲ್ಲಿ ಸೇನೆಯ ಶಸ್ತ್ರಾಸ್ತ್ರ ಉಗ್ರಾಣದಲ್ಲಿ ಘಟಿಸಿದ ಬೆಂಕಿ ಅವಘಡ ೧೯ ಜನರನ್ನು ಬಲಿ ತೆಗೆದುಕೊಂಡ ಹಿನ್ನಲೆಯಲ್ಲಿ ಈ ಪ್ರಶ್ನೆಗಳು ಎದ್ದಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com