ದಾದ್ರಿಯಲ್ಲಿ ಮತ್ತೆ ಉದ್ವಿಗ್ನ: ಅಖ್ಲಾಕ್ ಕುಟುಂಬ ವಿರುದ್ದ ಎಫ್ಐಆರ್ ದಾಖಲೆಗೆ 20 ದಿನಗಳ ಗಡುವು

ಮೊಹಮ್ಮದ್ ಅಖ್ಲಾಕ್ ಹತ್ಯೆಯಿಂದಾಗಿ 9 ತಿಂಗಳ ಹಿಂದೆ ಸುದ್ದಿಯಾಗಿದ್ದ ಉತ್ತರಪ್ರದೇಶದ ದಾದ್ರಿಯಲ್ಲಿ ಮತ್ತೆ...
ಅಖ್ಲಾಕ್ ಕುಟುಂಬ
ಅಖ್ಲಾಕ್ ಕುಟುಂಬ
ನೋಯ್ಡಾ: ಮೊಹಮ್ಮದ್ ಅಖ್ಲಾಕ್ ಹತ್ಯೆಯಿಂದಾಗಿ 9 ತಿಂಗಳ ಹಿಂದೆ ಸುದ್ದಿಯಾಗಿದ್ದ ಉತ್ತರಪ್ರದೇಶದ ದಾದ್ರಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. 
9 ತಿಂಗಳ ಹಿಂದೆ ಅಖ್ಲಾಕ್ ಕುಟುಂಬವು ಗೋಮಾಂಸ ತಿಂದಿದೆ ಎಂದು ಆರೋಪಿಸಿ ಮನೆಗೆ ನುಗ್ಗಿ ಗುಂಪೊಂದು ದಾಳಿ ಮಾಡಿ ಅಖ್ಲಾಕ್ ನನ್ನು ಹತ್ಯೆ ಮಾಡಿದ್ದರು. ಈ ಕುಂಟುಬದ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಕೆಲ ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೇ ಸ್ಥಳೀಯರು ಮಹಾಪಂಚಾಯತ್ ನಡೆಸಲು ನಿರ್ಧರಿಸಿದ್ದಾರೆ. 
ಈ ಹಿನ್ನಲೆಯಲ್ಲಿ ಬಿಷಾಡಾ ಗ್ರಾಮದಲ್ಲಿ ನಿಷೇದಾಜ್ಞೆ ಹೊರಡಿಸಲಾಗಿತ್ತು. ಆದರೆ ಪೊಲೀಸರ ಆದೇಶವನ್ನೂ ಉಲ್ಲಂಘಿಸಿದ್ದ ಗ್ರಾಮಸ್ಥರು ಕೆಲವು ಶಿವಸೇನೆ ಸದಸ್ಯ ಜತೆಗೂಡಿ ಹಲವು ಕಡೆ ಪ್ರತಿಭಟನಾ ಸಭೆಗಳ್ನು ನಡೆಸಿದ್ದು, ಅಖ್ಲಾಕ್ ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಿಸುವಂತೆ 20 ದಿನಗಳ ಗಡವು ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನು ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿ ಸಭೆ ನಡೆಸಿದ್ದಾರೆ. ಇದೇ ದೇವಸ್ಥಾನದಲ್ಲಿ 9 ತಿಂಗಳ ಹಿಂದೆ ಅರ್ಚಕರು ಅಖ್ಲಾಕ್ ಕುಟುಂಬ ಗೋಮಾಂತ ಸೇವಿಸಿದ್ದಾರೆ ಎಂದು ಘೋಷಿಸಿದ್ದರು. ಆದಾದ ನಂತರ ಅಖ್ಲಾಕ್ ಮನೆ ಮೇಲೆ ದಾಳಿ ಮಾಡಲಾಗಿತ್ತು. 
20 ದಿನಗಳ ಒಳಗಾಗಿ ಕ್ರಮ ಕೈಗೊಳ್ಳದೇ ಇದ್ದರೆ, ಸಾರ್ವಜನಿಕರ ಕೋಪವನ್ನು ತಡೆಯಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ನಾಯಕ ಸಂಜಯ್ ರಾಣಾ ಎಚ್ಚರಿಸಿದ್ದಾರೆ. ದಾದ್ರಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 
ಅಖ್ಲಾಕ್ ಮನೆಯಲ್ಲಿ ಇದ್ದದ್ದು ಬೀಫ್ ಅಲ್ಲ, ಮಟನ್ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿತ್ತು. ಆದರೆ ತದ ನಂತರ ಮಥುರಾ ವಿಧಿ ವಿಜ್ಞಾನ ಪ್ರಯೋಗಾಲಯವು ಅಖ್ಲಾಕ್ ಮನೆಯಲ್ಲಿ ಸಿಕ್ಕಿದ್ದು ಗೋಮಾಂಸ ಎಂದು ವರದಿ ನೀಡಿತ್ತು. ಈ ಹಿನ್ನಲೆಯಲ್ಲಿ ಮತ್ತೊಮ್ಮೆ ದಾದ್ರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಇನ್ನು ವಿಧಿ ವಿಜ್ಞಾನದ ವರದಿ ಸುಳ್ಳು ಎಂದಿರುವ ಅಖ್ಲಾಕ್ ಕುಟುಂಬ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com