ಕಾಗೋಡು ತಿಮ್ಮಪ್ಪ
ಪ್ರಧಾನ ಸುದ್ದಿ
ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಮ್ ಭಟ್ ಸೂಕ್ತ ಅಲ್ಲ: ಕಾಗೋಡು ತಿಮ್ಮಪ್ಪ
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತ....
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತ ಶ್ಯಾಮ್ ಭಟ್ ಅವರ ಹೆಸರು ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಂಗಳವಾರ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ ಅವರು, 'ನನಗೆ ಶ್ಯಾಂ ಭಟ್ ಅವರನ್ನು ಶಿಫಾರಸು ಮಾಡಿರುವ ಬಗ್ಗೆ ತೀವ್ರ ಅಸಮಧಾನ ಇದೆ. ರಾಜ್ಯ ಸರ್ಕಾರ ಕೆಪಿಎಸ್ಸಿಗೆ ಶ್ಯಾಮ್ ಭಟ್ ಹೆಸರು ಶಿಫಾರಸು ಮಾಡಿರುವುದು ತಪ್ಪು ಎಂದಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಮ್ ಭಟ್ ಅವರ ಆಯ್ಕೆ ಸೂಕ್ತ ಅಲ್ಲ, ಇದನ್ನು ರಾಜ್ಯ ಪಾಲರು ಒಪ್ಪುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಮ್ ಭಟ್ ಅವರ ಹೆಸರನ್ನು ಶಿಫಾರಸು ಮಾಡಿದೆ. ಆದರೆ ರಾಜ್ಯಪಾಲರು ಅವರ ಹೆಸರನ್ನು ಇನ್ನೂ ಪರಿಶೀಲನೆ ಹಂತದಲ್ಲಿಟ್ಟಿದ್ದಾರೆ. ಆದರೆ ಸದಸ್ಯ ಸ್ಥಾನಗಳಿಗೆ ಶಿಫಾ ರಸು ಮಾಡಲಾಗಿದ್ದ ಲಕ್ಷ್ಮೀನರಸಯ್ಯ ಹಾಗೂ ಸೈಯದ್ ಅಹಮದ್ ನೇಮಕಕ್ಕೆಅಂಕಿತ ಹಾಕಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ