

ದೆಹಲಿಯಲ್ಲಿ ೨೩ ವರ್ಷದ ನಿರ್ಭಯಾಳನ್ನು ಗ್ಯಾಂಗ್ ರೇಪ್ ಮಾಡಿ ರಸ್ತೆ ಬದಿಗೆ ಎಸೆದು ಹೋಗಿದ್ದಾಗ, ಈ ಪ್ರಕರಣ ಯಾರ ಸುಪರ್ದಿಗೆ ಒಳಪಟ್ಟಿದ್ದು ಎಂದು ಎರಡು ಪೋಲಿಸ್ ಠಾಣೆಗಳು ವಾಗ್ವಾದ ನಡೆದಿದ್ದವು.
ಅದೇ ಸಮಯದಲ್ಲಿ ಈ ಪ್ರಕರಣದ ಬಗ್ಗೆ ನಿರ್ಲಕ್ಷ ವಹಿಸಿ ತಕ್ಷಣ ಹುಡುಕದೆ ಹೋಗಿದ್ದಕ್ಕೆ, ರೇಪ್ ಮಾಡಿದ ವ್ಯಕ್ತಿಗಳು ಬಸ್ಸನ್ನು ನಗರದಲ್ಲಿ ಎರಡು ಘಂಟೆಗಳ ಕಾಲ ಸುತ್ತಾಡಿಸಿದ್ದರು.
ಈ ವಾಗ್ವಾದದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಆ ಪ್ರಕರಣದ ತನಿಖೆಯನ್ನು ವಹಿಸಲಾಗಿತ್ತು ಆದರೆ ಈಗ ಇವರ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಸ್ಟೇಶನ್ ಹೌಸ್ ಅಧಿಕಾರಿ ಅನಿಲ್ ಶರ್ಮಾ ದೆಹಲಿಯಲ್ಲಿ ನಡೆಸಿದ ದಾಳಿಯ ವೇಳೆಯಲ್ಲಿ ಮಹಿಳೆಗೆ ನಿಂದಿಸಿ, ಅವರ ಅಪ್ರಾಪ್ತ ಮಕ್ಕಳನ್ನು ಹೊಡೆದ ಆರೋಪ ಎದುರಿಸುತ್ತಿದ್ದಾರೆ.
ಅವರ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ನಲ್ಲಿ, ಸಂತ್ರಸ್ತರ ಕುಟುಂಬವನ್ನು ಹಂದಿಗಳು ಎಂದು ಜರಿದಿದ್ದಲ್ಲದೆ, ನಕಲಿ ಎಂಕೌಂಟರ್ ಮಾಡುವುದಾಗಿ ಬೆದರಿಸಿದ್ದಾಗಿ ಕೂಡ ಆರೋಪಿಸಲಾಗಿದೆ.
ಇಂಡಿಯಾ ಟೈಮ್ಸ್ ವರದಿ ಪ್ರಕಾರ ಶರ್ಮ ಕುಟುಂಬದ ಅಪ್ರಾಪ್ತ ಮಕ್ಕಳಿಗೆ ಒತ್ತಡ ಹೇರಿ ಬಂಧಿಸಿದ್ದಾರೆ. ಆ ಕುಟುಂಬದ ವ್ಯಕ್ತಿಯೊಬ್ಬನ ಪತ್ನಿ ಇದನ್ನು ತಡೆಯಲು ಪ್ರಯತ್ನಿಸಿದಾಗ, ಅವರ ಸೀರೆಯನ್ನು ಬಿಚ್ಚಿ ಖಾಸಗಿ ಅಂಗಗಳನ್ನು ಮುಟ್ಟಿದ್ದಾರೆ ಎಂಬ ಆರೋಪವನ್ನು ಕೂಡ ಅನಿಲ್ ಶರ್ಮಾ ಮೇಲೆ ಹೊರಿಸಲಾಗಿದೆ.
Advertisement