ಪೇದೆ ಹತ್ಯೆ: ಬಂಧಿತ ಬೆಂಗಳೂರು ಯುವಕ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ಸಾವು

ಪೊಲೀಸ್ ಪೇದೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದ ಯುವಕ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ನಿಗೂಢ ರೀತಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೊಸೂರು: ಪೊಲೀಸ್ ಪೇದೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದ ಬೆಂಗಳೂರಿನ ಯುವಕ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪದ್ದಾನೆ. ಇದು ಲಾಕಪ್ ಡೆತ್ ಎಂದು ಆರೋಪಿಸಿಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು ಆರೋಪಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.
ಹೊಸೂರು ಟೌನ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಮುನುಸಾಮಿ(45) ಎಂಬುವವರನ್ನು ಬುಧವಾರ ರಾತ್ರಿ ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ ಆರೋಪದ ಮೇಲೆ ಇಂದು ಬೆಳಗ್ಗೆ 19 ವರ್ಷದ ಬುಜ್ಜಿ ಅಲಿಯಾಸ್ ಮೂರ್ತಿ ಎಂಬ ಯುಕನನ್ನು ಬಂಧಿಸಲಾಗಿತ್ತು. 
ಬುಜ್ಜಿ ನಿನ್ನೆ ಸಂಜೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಪಂಚಾಯತ್ ಯೂನಿಯನ್ ಪ್ರಾಥಮಿಕ ಶಾಲೆಯ ಶಿಕ್ಷಕಿ ಪಾರ್ವತಿ ಸುಮನ್ ಎಂಬುವವರ ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದ. ಘಟನೆಯ ಮಾಹಿತಿ ಪಡೆದ ಹೊಸೂರು ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದ ತಂಡ ಕಳ್ಳರ ಪತ್ತೆಗೆ ತೆರಳಿತ್ತು. ನಾಗರಾಜ್ ಹಾಗೂ ಮುನುಸಾಮಿ ತಂಡ ಹೊಸೂರು ರೇಲ್ವೆ ನಿಲ್ದಾಣದ ಬಳಿ ನಾಲ್ವರು ಕಳ್ಳರ ಗ್ಯಾಂಗ್ ಅನ್ನು ಪತ್ತೆಹಚ್ಚಿದೆ. ಈ ವೇಳೆ ಬುಜ್ಜಿ ಹಾಗೂ ಇತರರು ತಮ್ಮನ್ನು ಹಿಡಿಯಲು ಬಂದ ಮುಖ್ಯ ಪೇದೆ ಮುನುಸಾಮಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಕೂಡಲೇ ಮುನುಸಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಹೊಸೂರು ಪೊಲೀಸರು ಇಂದು ಬೆಳಗ್ಗೆ ಬುಜ್ಜಿಯನ್ನು ಬಂಧಿಸಿದ್ದು, ಇತರರು ಪರಾರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com