ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ದಿನೇಶ್ ಮೊಹಾನಿಯಾ ಅವರಿಗೆ ಜಾಮೀನು ನೀಡಲು ಮೆಟ್ರೋಪಾಲಿಟನ್ ಮೆಜೆಸ್ಟ್ರೇಟ್ ಭವನ್ ಕಾಲಿಯಾ ಸೋಮವಾರ ನಿರಾಕರಿಸಿದ್ದಾರೆ.
ನೀರು ಸರಬರಾಜು ವ್ಯತ್ಯಯದ ಬಗ್ಗೆ ದೂರು ನೀಡಲು ಮೊಹಾನಿಯಾ ಅವರ ಗೃಹ ಕಚೇರಿಗೆ ಹೋಗಿದ್ದ ಮಹಿಳೆಗೆ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ನ ಶಾಸಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಅಂದೆ ತಮ್ಮ ಗೃಹದಲ್ಲಿ ಪತ್ರಿಕಾ ಗೋಷ್ಠಿ ನಡೆಸುವ ವೇಳೆಯಲ್ಲಿ ಮೊಹಾನಿಯಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.