ಪಾರಂಪರಿಕ ತಾಣಗಳ ವೃತ್ತಿ ಛಾಯಾಗ್ರಹಣಕ್ಕೆ ಎ ಎಸ್ ಐ ಪರವಾನಗಿ ಅಗತ್ಯ

ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಛಾಯಾಗ್ರಹಣ ಮಾಡುವ ಛಾಯಾಚಿತ್ರಕಾರರು ಕಡ್ಡಾಯ ಪರವಾನಗಿ
ಹಂಪಿ ಕಲ್ಲಿನ ರಥ
ಹಂಪಿ ಕಲ್ಲಿನ ರಥ

ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಛಾಯಾಗ್ರಹಣ ಮಾಡುವ ಛಾಯಾಚಿತ್ರಕಾರರು ಕಡ್ಡಾಯ ಪರವಾನಗಿ ಪಡೆಯುವ ನೀತಿ ರೂಪಿಸಲು ಕೇಂದ್ರ ಸಂಸ್ಕೃತಿ ಇಲಾಖೆ ಮುಂದಾಗಿದೆ.

"ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಕಾರಣಗಳಿಗಾಗಿ ಛಾಯಾಗ್ರಹಣ ಮಾಡುವುದಕ್ಕೆ ಪರವಾನಗಿ ಕಡ್ಡಾಯ ಮಾಡಲು ಎ ಎಸ್ ಐ ಛಾಯಾಗ್ರಹಣ ನೀತಿಗೆ ಈ ತಿದ್ದುಪಡಿಯನ್ನು ಮುಂದಿನ ತಿಂಗಳ ಮೊದಲ ಭಾಗದಲ್ಲಿ ಮಾಡುವ ಸಾಧ್ಯತೆ ಇದೆ" ಎಂದು ಮೂಲಗಳು ತಿಳಿಸಿವೆ.

ಈಗ ಯಾರು ಬೇಕಾದರೂ ಈ ಪಾರಂಪರಿಕ ತಾಣಗಳಲ್ಲಿ ವಾಣಿಜ್ಯಾತ್ಮಕ ದೃಷ್ಟಿಯಿಂದ ಛಾಯಾಗ್ರಹಣ ನಡೆಸಬಹುದಾಗಿದೆ ಇದರಿಂದ ಹಲವು ಬಾರಿ ಈ ಛಾಯಾಗ್ರಾಹಕರು ಫೋಟೋಗಳನ್ನು ತೆಗೆಯಲು ಪ್ರವಾಸಿಗರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂದು ಕೂಡ ಮೂಲಗಳು ತಿಳಿಸಿವೆ.

"ಈ ನಡೆಯಿಂದ ಒಳ್ಳೆಯ ಛಾಯಾಗ್ರಾಹಕರು ದೊರಕುವರಲ್ಲದೆ, ಪ್ರವಾಸಿಗರಿಗೆ ಹಿಂಸೆ ತಪ್ಪುತ್ತದೆ" ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಅಗತ್ಯಕ್ಕೆ ತಕ್ಕಂತೆ ಛಾಯಾಗ್ರಾಹಕರ ಸಂಖೆಯನ್ನು ಎ ಎಸ್ ಐ ನಿಗದಿಗೊಳಿಸುತ್ತದೆ ಎಂದು ಕೂಡ ತಿಳಿದುಬಂದಿದೆ.

ಸಂಸ್ಕೃತಿ ಇಲಾಖೆಯಡಿ ಇರುವ ಎ ಎಸ್ ಐ ನಡಿ ಈಗ ಸುಮಾರು ೩೬೦೦ ರಾಷ್ಟ್ರೀಯ ಪರಂಪರಾ ತಾಣಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com