ಶ್ರೀ ಶ್ರೀ ರವಿಶಂಕರ್ ಕಾನೂನಿಗಿಂತಲೂ ಮೇಲೆ ಇದ್ದಾರಾ?: ಸರ್ಕಾರಕ್ಕೆ ವಿಪಕ್ಷಗಳ ಪ್ರಶ್ನೆ

ರು. 5 ಕೋಟಿ ದಂಡ ವಿಧಿಸಿದ್ದರೂ, ದಂಡ ಪಾವತಿ ಮಾಡುವುದಿಲ್ಲ ಎಂದು ಶ್ರೀ ಶ್ರೀ ರವಿಶಂಕರಕ್ ಹೇಳುತ್ತಿದ್ದಾರೆ. ಹೀಗೆ ಹೇಳುತ್ತಿರುವ ಅವರನ್ನು ಜೈಲಿಗಟ್ಟಬೇಕು...
ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಿದ್ಧವಾಗಿರುವ ವೇದಿಕೆ
ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಸಿದ್ಧವಾಗಿರುವ ವೇದಿಕೆ
ನವದೆಹಲಿ: ಯಮುನಾ ತಟದಲ್ಲಿ ಆಯೋಜಿಸಲುದ್ದೇಶಿಸಿರುವ ವಿಶ್ವ ಸಾಂಸ್ಕೃತಿಕ ಉತ್ಸವದ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಚರ್ಚೆ ನಡೆದು, ಎರಡನೇ ದಿನವೂ ಕಲಾಪ ಸ್ಥಗಿತಗೊಂಡಿದೆ.  ಈ ಕಾರ್ಯಕ್ರಮ ಆಯೋಜಿಸಿರುವ ಆರ್ಟ್ ಆಫ್ ಲಿವಿಂಗ್‌ಗೆ  ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ರು. 5 ಕೋಟಿ ದಂಡ ವಿಧಿಸಿದ್ದರೂ, ದಂಡ ಪಾವತಿ ಮಾಡುವುದಿಲ್ಲ ಎಂದು ಶ್ರೀ ಶ್ರೀ ರವಿಶಂಕರಕ್ ಹೇಳುತ್ತಿದ್ದಾರೆ. ಹೀಗೆ ಹೇಳುತ್ತಿರುವ ಅವರನ್ನು ಜೈಲಿಗಟ್ಟಬೇಕು. ಶ್ರೀ ಶ್ರೀ ರವಿಶಂಕರ್ ಕಾನೂನಿನಿಂದ ಮೇಲೆ ಇದ್ದಾರೆಯೇ? ಎಂದು ಜೆಡಿಯು ನೇತಾರ ಶರದ್ ಯಾದವ್ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಪಾಲು ಇದೆಯೇ? ಎಂಬುದನ್ನು ಸರ್ಕಾರ ಸ್ಪಷ್ಟ ಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಅದೇ ವೇಳೆ ಕಾರ್ಯಕ್ರಮ ಆಯೋಜಿಸಲು ನಮಗೆ ಅಗ್ನಿಶಾಮಕ ದಳದ ಅನುಮತಿ ಲಭಿಸಿದೆ ಎಂದು ಆರ್ಟ್ ಆಫ್ ಲಿವಿಂಗ್ ಕಾರ್ಯಕರ್ತರು ಎನ್‌ಜಿಟಿಗೆ ಹೇಳಿದ್ದಾರೆ. ದಂಡ ಪಾವತಿ ಮಾಡಲು ನಾಲ್ಕು ವಾರಗಳ ಅವಧಿ ನೀಡಬೇಕೆಂದು ಅವರು ಬಿನ್ನವಿಸಿದ್ದಾರೆ.
ಆದಾಗ್ಯೂ, ವಿಶ್ವ ಸಾಂಸ್ಕೃತಿಕ ಉತ್ಸವದ ವೇದಿಕೆ ಸುರಕ್ಷಿತವಾಗಿಲ್ಲ. ಯಮುನಾ ನದಿಯಲ್ಲಿ ತೇಲುವ ಸೇತುವೆ ನಿರ್ಮಾಣಕ್ಕೆ ಆರ್ಟ್ ಆಫ್ ಲಿವಿಂಗ್‌ಗೆ ಅನುಮತಿ ನೀಡಿವರು ಯಾರು ? ಎಂಬ ಪ್ರಶ್ನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ, ದೆಹಲಿ ಸರ್ಕಾರ ಹಾಗೂ ಕೇಂದ್ರ ಅರಣ್ಯ ,ಸಚಿವಾಲಯಕ್ಕೆ ಕೇಳಿತ್ತು. ಯಮುನಾ ತಟದಲ್ಲಿರುವ ಮರಳು ರಾಶಿಗೆ ಈ ವೇದಿಕೆಯನ್ನು ಹೊರಲು ಸಾಧ್ಯವಿಲ್ಲ. ವಿಶೇಷ ಅತಿಥಿಗಳಿಗಾಗಿ ಬೇರೆಯೇ ವೇದಿಕೆಯನ್ನು ನಿರ್ಮಿಸಬೇಕೆಂದು ಅಭಿವೃದ್ಧಿ ಪ್ರಾಧಿಕಾರ ಹೇಳಿತ್ತು.
ಇತ್ತ ಶುಕ್ರವಾರ ಸಂಜೆಯೊಳಗೆ ದಂಡ ಪಾವತಿ ಮಾಡಬೇಕೆಂಬ ಎನ್‌ಜಿಟಿ ಆದೇಶವನ್ನು ಪ್ರಶ್ನಿಸಿ ಆರ್ಟ್ ಆಫ್ ಲಿವಿಂಗ್ ಸುಪ್ರೀಂ ಕೋರ್ಟ್ ಮೆಟ್ಟಲೇರಲಿದ್ದಾರೆ ಎಂಬ ಸೂಚನೆ ಲಭಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com