ಶಾಂತಿಗಾಗಿ ಜೈಹಿಂದ್, ಪಾಕಿಸ್ತಾನ ಜಿಂದಾಬಾದ್ ಮಂತ್ರ ಜಪಿಸಿ: ಶ್ರೀ ರವಿಶಂಕರ್ ಗುರೂಜಿ

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ, ಶಾಂತಿಗಾಗಿ ಜೈಹಿಂದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಮಂತ್ರ ಜಪಿಸಲು ಸಲಹೆ ನೀಡಿದ್ದಾರೆ...
ಶ್ರೀ ರವಿಶಂಕರ ಗುರೂಜಿ
ಶ್ರೀ ರವಿಶಂಕರ ಗುರೂಜಿ
Updated on

ನವದೆಹಲಿ: ಜವಹರ್ ಲಾಲ್ ನೆಹು ವಿವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿ ದೇಶ ದ್ರೋಹ ಪ್ರಕರಣ ನಡೆದ ಬೆನ್ನಲ್ಲೇ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ, ಶಾಂತಿಗಾಗಿ ಜೈಹಿಂದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಮಂತ್ರ ಜಪಿಸಲು ಸಲಹೆ ನೀಡಿದ್ದಾರೆ.

ದೆಹಲಿಯ ಯಮುನಾ ನದಿ ದಡದಲ್ಲಿನಡೆಯುತ್ತಿರುವ ಮೂರುದಿನಗಳ ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು ದೇಶದಲ್ಲಿ ಶಾಂತಿ ನೆಲೆಸಬೇಕಾದರೇ ಹಾಗೂ ಧರ್ಮದ ಅಭಿವೃದ್ಧಿಗಾಗಿ ಈ ಮಂತ್ರ ಜಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿ ಶ್ರೀ ರವಿಶಂಕರ್ ಗುರೂಜಿ ಇಲ್ಲಿ  ಜನಿಸಿರುವುದು ಭಾರತದ ಅದೃಷ್ಟ ಎಂದು ಹೇಳಿದ್ದಾರೆ

ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ,ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com