ಜಾರ್ಖಂಡ ಮುಖ್ಯಮಂತ್ರಿ ರಘುಬೀರ್ ದಾಸ್
ಪ್ರಧಾನ ಸುದ್ದಿ
ಮೀಸಲಾತಿ ಕೋಟಾ ಹೆಚ್ಚಿಸುವ ಯಾವುದೇ ಇರಾದೆಯಿಲ್ಲ: ಜಾರ್ಖಂಡ ಮುಖ್ಯಮಂತ್ರಿ
ಜಾರ್ಖಂಡದಲ್ಲಿ ಈಗಿರುವ ೫೦% ಉದ್ಯೋಗ ಮೀಸಲಾತಿಯನ್ನು ಹೆಚ್ಚಿಸುವ ಯಾವುದೇ ಇರಾದೆಯಿಲ್ಲ ಎಂದು ಮುಖ್ಯಮಂತ್ರಿ ರಘುಬೀರ್ ದಾಸ್ ಸೋಮವಾರ ಹೇಳಿದ್ದಾರೆ.
ರಾಂಚಿ: ಜಾರ್ಖಂಡದಲ್ಲಿ ಈಗಿರುವ ೫೦% ಉದ್ಯೋಗ ಮೀಸಲಾತಿಯನ್ನು ಹೆಚ್ಚಿಸುವ ಯಾವುದೇ ಇರಾದೆಯಿಲ್ಲ ಎಂದು ಮುಖ್ಯಮಂತ್ರಿ ರಘುಬೀರ್ ದಾಸ್ ಸೋಮವಾರ ಹೇಳಿದ್ದಾರೆ.
ಮೀಸಲಾತಿಯನ್ನು ಕೋಟಾವನ್ನು ಹೆಚ್ಚಿಸುವಂತೆ ಜಾರ್ಖಂಡ ವಿಕಾಸ ಮೋರ್ಚ-ಪ್ರಜಾತಾಂತ್ರಿಕ ಶಾಸಕ ಪ್ರದೀಪ್ ಯಾದವ್ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
"ಮೀಸಲಾತಿಯನ್ನು ಈಗಿರುವ ೫೦% ನಿಂದ ೭೩% ಗೆ ಸರ್ಕಾರ ಏರಿಸಬೇಕೆಂದು" ಯಾದವ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ದಾಸ್ "ಸರ್ಕಾರ ೨೦೦೧ ರಲ್ಲಿ ೭೩% ಮೀಸಲಾತಿ ಕೋಟಾ ಘೋಷಣೆ ಮಾಡಿತ್ತು, ಆದರೆ ಅದಕ್ಕೆ ಜಾರ್ಖಂಡ ಹೈಕೋರ್ಟ್ ತಡೆ ನೀಡಿತ್ತು. ಆದುದರಿಂದ ಈಗ ಮೀಸಲಾತಿ ಕೋಟಾ ಹೆಚ್ಚಿಸುವ ಯಾವುದೇ ಇರಾದೆ ಇಲ್ಲ" ಎಂದು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಈಗ ಸದ್ಯಕ್ಕೆ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗಗ್ಗೆ ಕ್ರಮವಾಗಿ ೨೬%, ೧೦% ಮತ್ತು ೧೪% ಮೀಸಲಾತಿಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ