ಪೊಖಾರದಲ್ಲಿ ಸುಷ್ಮಾ, ಸರ್ತಜ್ ಉಪಹಾರ ಸಭೆ

ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಜ್ ಅಜೀಜ್ ಪೋಖಾರದಲ್ಲಿ ಮಂಗಳವಾರ ಬೆಳಗಿನ ಉಪಹಾರ ಸಭೆ
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಜ್ ಅಜೀಜ್
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಜ್ ಅಜೀಜ್

ಪೋಖಾರ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಜ್ ಅಜೀಜ್ ಪೋಖಾರದಲ್ಲಿ ಮಂಗಳವಾರ ಬೆಳಗಿನ ಉಪಹಾರ ಸಭೆ ನಡೆಸಿದರು.

ನೇಪಾಳದ ಉಪ ಪ್ರಧಾನಿ ಕಮಲ್ ಥಾಪಾ ಆಯೋಜಿಸಿದ್ದ ಬೆಳಗಿನ ಉಪಹಾರದಲ್ಲಿ ಈ ಎರಡು ಮುಖಂಡರು ಮುಖಾಮುಖಿ ಭೇಟಿಯಾಗಿದ್ದರು.

ಇಂದು ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಉದ್ಘಾಟಿಸಲಿರುವ ೩೭ ನೇ ಸಾರ್ಕ್ ಸಚಿವರ ಸಮ್ಮೇಳನದಲ್ಲಿ ಭಾಗಿಯಾಗಲು ಬುಧವಾರ ಇಬ್ಬರೂ ಮುಖಂಡರು ನೇಪಾಳದ ಪೋಖಾರಕ್ಕೆ ಬಂದಿಳಿದಿದ್ದಾರೆ.

ಈ ಉಪಹಾರ ಸಭೆ ಐದು ನಿಮಿಷಗಳವರೆಗೆ ಜರುಗಿದ್ದು ನಂತರ ಥಾಪಾ ಅವರನ್ನು ಸೇರಿದ್ದಾರೆ. ಇವರಿಬ್ಬರೂ ಬುಧವಾರ ರಾತ್ರಿ ಊಟದ ಸಮಯದಲ್ಲೂ ಭೇಟಿಯಾಗಿದ್ದರು.

ಭಾರತ ಮಾತು ಪಾಕಿಸ್ತಾನ ಸಂಬಂಧ ವೃದ್ಧಿಗೆ ಸುಷ್ಮಾ ಮತ್ತು ಸರ್ತಜ್ ಗುರುವಾರ ಸಂಜೆ ಮತ್ತೆ ಭೇಟಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com