ಮೋದಿ ಅಧಿಕಾರಕ್ಕೇರುವುದಾಗಿ 1555 ರಲ್ಲೇ ಭವಿಷ್ಯ ನುಡಿದಿದ್ದ ನಾಸ್ಟ್ರಡಾಮಸ್

ನರೇಂದ್ರ ಮೋದಿ ಅವರು 2014ರಿಂದ 2026ರ ವರೆಗೆ ಭಾರತದಲ್ಲಿ ಅಧಿಕಾರ ಚಲಾಯಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರಂತೆ....
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ನರೇಂದ್ರ ಮೋದಿ ಅವರು  2014ರಿಂದ 2026ರ ವರೆಗೆ ಭಾರತದಲ್ಲಿ ಅಧಿಕಾರ ಚಲಾಯಿಸಲಿದ್ದಾರೆ ಎಂದು ಫ್ರಾನ್ಸ್  ಪ್ರವಾದಿ ಭವಿಷ್ಯ ನುಡಿದಿದ್ದರಂತೆ. ಈ ಭವಿಷ್ಯವಾಣಿಯನ್ನು ಗೃಹ ಸಚಿವಾಲಯದ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಅಮೇಜಿಂಗ್ ಫ್ಯಾಕ್ಟ್ಸ್ ಎಂದು ಬರೆದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ರಿಜಿಜು ಪೋಸ್ಟ್  ಹೀಗಿದೆ.
ಈಗಿನ ಲೋಕಸಭೆಯಲ್ಲಿ :
ಬಿಜೆಪಿ - 283 ಸ್ಥಾನ :  2 + 8 + 3 = 13
ಎನ್‌ಡಿಎ - 337 ಸ್ಥಾನ : 3 + 3 +7 = 13
ಯುಪಿಎ - 58 : 5 + 8 = 13
ಇತರರು - 148 : 1 + 4 + 8 = 13
ನಾಸ್ಟ್ರಡಾಮಸ್ 450 ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಪ್ರಕಾರ ಭಾರತದಲ್ಲಿ ನರೇಂದ್ರ ಮೋದಿ ಯುಗ ಆರಂಭವಾಗುವುದಕ್ಕೆ ಸಂಖ್ಯಾಶಾಸ್ತ್ರದ ಪ್ರಕಾರ ಈ 13ರ ಸಂಗಮವು ಮಹತ್ವದ್ದಾಗಿದೆ.
ಫ್ರೆಂಚ್  ಪ್ರವಾದಿಯ ಭವಿಷ್ಯ ಪ್ರಕಾರ 2014 ರಿಂದ 2026ರವರೆಗೆ ಭಾರತವನ್ನು ಮುನ್ನಡೆಸುವ ಆ ವ್ಯಕ್ತಿಯನ್ನು ಮೊದಲಿಗೆ ಜನರು ದ್ವೇಷಿಸುತ್ತಾರೆ. ಅನಂತರ ಆ ವ್ಯಕ್ತಿಯನ್ನು ಜನರು ತುಂಬಾ ಪ್ರೀತಿಸಲು ತೊಡಗುತ್ತಾರೆ. ಆ ವ್ಯಕ್ತಿ ದೇಶದ ದಿಕ್ಕು ದೆಸೆಯನ್ನೇ ಬದಲಿಸಲಿದ್ದಾರೆ.
16ನೇ ಶತಮಾನದಲ್ಲಿ ಬದುಕಿದ್ದ ಫ್ರೆಂಚ್ ಪ್ರವಾದಿ ಮೈಕಲ್ ಡಿ ನಾಸ್ಟ್ರಡಾಮಸ್ ಈ ರೀತಿ ಭವಿಷ್ಯ ನುಡಿದಿದ್ದು 1555ನೇ ಇಸವಿಯಲ್ಲಿ. ಮಧ್ಯ ವಯಸ್ಸಿನ ಆ ವ್ಯಕ್ತಿ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿಗೇ ಸುವರ್ಣಕಾಲವನ್ನು ತರಲಿದ್ದಾರೆ. ಆತನ ನಾಯಕತ್ವದಲ್ಲಿ ಭಾರತ ಜಾಗತಿಕ ನಾಯಕ ಆಗುವುದಲ್ಲದೆ ಹಲವಾರು ದೇಶಗಳು ಭಾರತದಡಿ ಆಸರೆ ಪಡೆಯುತ್ತವೆ ಎಂದು ಭವಿಷ್ಯ ನುಡಿದಿರುವುದಾಗಿ ಎಂದು  ಪೋಸ್ಟ್ನಲ್ಲಿ ಹೇಳಲಾಗಿದೆ. ಈ ಪೋಸ್ಟ್ನ ಜತೆಗೆ ಜರ್ಮನ್ ಚಾನ್ಸೆಲರ್ ಆಂಜೆಲಾ ಮೇರ್ಕಲ್ ಅವರು ದೆಹಲಿಗೆ ಬಂದಾಗ ಮೋದಿಯವರೊಂದಿಗೆ ತೆಗೆಸಿಕೊಂಡ ಫೋಟೋವನ್ನು ರಿಜಿಜು ಶೇರ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com