ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಷ್ಯಾದಲ್ಲಿ ದುಬೈ ವಿಮಾನ ಪತನ: ಇಬ್ಬರು ಭಾರತೀಯರು ಸೇರಿ 62 ಪ್ರಯಾಣಿಕರ ಸಾವು

61 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದುಬೈ ಮೂಲದ ವಿಮಾನ ದಕ್ಷಿಣ ರಷ್ಯಾದ ರೊಸ್ಟೋವ್ ಆನ್-ಡಾನ್ ನಲ್ಲಿ...
ಮಾಸ್ಕೋ: ದುಬೈ ಮೂಲದ ಫ್ಲೈದುಬೈ ಎಫ್ ರೆಡ್ -981 ಬೋಯಿಂಗ್ ವಿಮಾನ ದಕ್ಷಿಣ ರಷ್ಯಾದ ರೊಸ್ಟೋವ್ ಆನ್-ಡಾನ್ ನಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಭಾರತೀಯರು ಸೇರಿ 62 ಮಂದಿ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಶನಿವಾರ ಬೆಳಿಗ್ಗೆ ದುಬೈನಿಂದ ಆಗಮಿಸಿದ್ದ ಫ್ಲೈದುಬೈ ಎಫ್ ರೆಡ್ -981 ಬೋಯಿಂಗ್ ವಿಮಾನ ರೊಸ್ಟೋವ್ ಆನ್-ಡಾನ್ ನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿರಬೇಕಾದರೆ ಈ ದುರಂತ ಸಂಭವಿಸಿದೆ. 
ಬೋಯಿಂಗ್ ಕಂಪನಿಯ ಬೋಯಿಂಗ್-737 ವಿಮಾನ ಇದಾಗಿದ್ದು, ಹವಾಮಾನದ ವೈಪರೀತ್ಯದಿಂದಾಗಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಐವರು ಸಿಬ್ಬಂದಿ ಸೇರಿದಂತೆ ಒಟ್ಟು 61 ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ.

X

Advertisement

X
Kannada Prabha
www.kannadaprabha.com