2022ರ ವೇಳೆಗೆ ಬಡವರಿಗಾಗಿ 2.95 ಕೋಟಿ ಮನೆ ನಿರ್ಮಾಣ: ಕೇಂದ್ರ ಸರ್ಕಾರ

ಎಲ್ಲರಿಗೂ ಮನೆ ಯೋಜನೆಯ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಬಡವರಿಗಾಗಿ 2.95 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ...
Representational image
Representational image
Updated on
ನವದೆಹಲಿ: ಎಲ್ಲರಿಗೂ ಮನೆ ಯೋಜನೆಯ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ  ಬಡವರಿಗಾಗಿ 2.95 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಸಚಿವ ಸಂಪುಟ ಅಂಗೀಕಾರ ನೀಡಿದೆ.
ಈ ಯೋಜನೆ ಅಂಗವಾಗಿ ಮನೆಯಿಲ್ಲದವರಿಗೆ ಸರ್ಕಾರ ಒಂದೂವರೆ ಲಕ್ಷ ರು. ಧನ ಸಹಾಯ ನೀಡಲಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಚಿವರ ಸಭೆಯಲ್ಲಿ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದು ಕೇಂದ್ರ ಸರ್ಕಾರ ಮಹತ್ತರವಾದ ಯೋಜನೆಯಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಸಚಿವ  ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವದ 75ನೇ ವಾರ್ಷಿಕ ಆಚರಿಸುವ 2022ನೇ ಇಸವಿಯಲ್ಲಿ ಎಲ್ಲರಿಗೂ ಮನೆ  ಎಂಬ ಕನಸು ನನಸಾಗಬೇಕಾದರೆ 2.95 ಕೋಟಿ ಮನೆ ನಿರ್ಮಾಣವಾಗಬೇಕಿದೆ. ದೇಶದಲ್ಲಿನ ಸಮತಟ್ಟು ಪ್ರದೇಶದಲ್ಲಿ  ವಾಸಿಸುವ ಬಡಕುಟುಂಬಗಳಿಗೆ ರು. 1.20 ಲಕ್ಷ ಹಾಗು ಗುಡ್ಡ ಪ್ರದೇಶ ಮತ್ತು ದುರ್ಗಮ ಪ್ರದೇಶಗಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ರು. 1. 30 ಲಕ್ಷ ಧನ ಸಹಾಯ ನೀಡಲಾಗುವುದು. 
ಎರಡು ಹಂತಗಳಾಗಿ ಆರೇಳು ವರ್ಷಗಳಲ್ಲಿ ಈ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತದೆ. ಮೊದಲ ಮೂರು ವರ್ಷದಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸರ್ಕಾರ ಸರಿಸುಮಾರು ರು. 82,000 ಕೋಟಿ ವ್ಯಯಿಸಲಿದೆ. ಇದರಲ್ಲಿ ರು. 65,000 ಕೋಟಿ ಬಜೆಟ್ನಲ್ಲಿ ತೆಗೆದಿರಿಸಿದ ಹಣ ಮತ್ತು ಉಳಿದ ಬಾಕಿ ಹಣವನ್ನು ನಬಾರ್ಡ್ನಿಂದ ನೀಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com