ನನ್ನ ಮರಣದ ನಂತರ ಉತ್ತರಾಧಿಕಾರಿಯನ್ನು ನೇಮಿಸಲಾಗುವುದು: ಗೀಲಾನಿ

ತಮ್ಮ ಮರಣದ ನಂತರವಷ್ಟೇ ಪಕ್ಷ ಉತ್ತರಾಧಿಕಾರಿಯನ್ನು ನೇಮಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪ್ರತ್ಯೇಕವಾದಿ ಮುಖಂಡ ಮತ್ತು ಹುರಿಯತ್ ಬಣದ ಅಧ್ಯಕ್ಷ ಸಯದ್ ಅಲಿ ಷಾ ಗೀಲಾನಿ
ಸಯ್ಯದ್ ಅಲಿ ಷಾ ಗೀಲಾನಿ
ಸಯ್ಯದ್ ಅಲಿ ಷಾ ಗೀಲಾನಿ

ಶ್ರೀನಗರ: ತಮ್ಮ ಮರಣದ ನಂತರವಷ್ಟೇ ಪಕ್ಷ ಉತ್ತರಾಧಿಕಾರಿಯನ್ನು ನೇಮಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪ್ರತ್ಯೇಕವಾದಿ ಮುಖಂಡ ಮತ್ತು ಹುರಿಯತ್ ಬಣದ ಅಧ್ಯಕ್ಷ ಸಯ್ಯದ್ ಅಲಿ ಷಾ ಗೀಲಾನಿ ಸೋಮವಾರ ಹೇಳಿದ್ದಾರೆ.

ಪ್ರತ್ಯೇಕವಾದಿ ಮುಖಂಡ ತನ್ನ ಉತ್ತರಾಧಿಕಾರಿಯನ್ನು ನೇಮಿಸಲಿದ್ದಾರೆ ಎಂಬ ವದಂತಿಗಳ ನಡುವೆ "ನನ್ನ ಮರಣದ ನಂತರವಷ್ಟೇ ತೆಹೆರೀಕ್-ಎ-ಹುರಿಯತ್ ನ ಅಧಿಕಾರಿಗಳು ಉತ್ತರಾಧಿಕಾರಿಯನ್ನು ನಿರ್ಧರಿಸಲಿದ್ದಾರೆ" ಎಂದಿದ್ದಾರೆ.

ಅಷ್ಟೇನೂ ಉತ್ತಮ ಆರೋಗ್ಯವನ್ನು ಹೊಂದಿಲ್ಲದ ಗೀಲಾನಿ ಮತ್ತೊಬ್ಬ ಹಿರಿಯ ಪ್ರತೇಕವಾದಿ ಮುಖಂಡ ಅಶ್ರಫ್ ಸೆಹರೈ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಿದ್ದಾರೆ ಎಂಬ ವದಂತಿ ಭಾನುವಾರ ಹರಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com