ಪತ್ರಕರ್ತ-ಛಾಯಾಚಿತ್ರಕಾರ ರವಿ ಕನೋಜಿಯಾ (ಫೋಟೋ ಕೃಪೆ: ಫೇಸ್ಬುಕ್ ಪುಟ)
ಪ್ರಧಾನ ಸುದ್ದಿ
'ನೀರು ರೈಲು' ಫೋಟೊ ತೆಗೆಯುವಾಗ ವಿದ್ಯುತ್ ಸ್ಪರ್ಶದಿಂದ ಪತ್ರಕರ್ತ ರವಿ ಕನೋಜಿಯಾ ಸಾವು
ಬರಪೀಡೀತ ಜಿಲ್ಲೆಗಳಿಗೆ ನೀರು ಕೊಂಡೊಯ್ಯಲು ಸಿದ್ಧವಾಗಿ ನಿಂತಿದ್ದ ನೀರು ರೈಲಿನ ಫೋಟೊ ತೆಗೆಯಲು ಹೋಗಿ ವಿದ್ಯುತ್ ಸ್ಪರ್ಶದಿಂದ ಪ್ರಮುಖ ದಿನಪತ್ರಿಕೆಯೊಂದರ ಪತ್ರಕರ್ತ-ಛಾಯಾಚಿತ್ರಕಾರ...
ಲಕನೌ: ಬರಪೀಡೀತ ಜಿಲ್ಲೆಗಳಿಗೆ ನೀರು ಕೊಂಡೊಯ್ಯಲು ಸಿದ್ಧವಾಗಿ ನಿಂತಿದ್ದ ನೀರು ರೈಲಿನ ಫೋಟೊ ತೆಗೆಯಲು ಹೋಗಿ ವಿದ್ಯುತ್ ಸ್ಪರ್ಶದಿಂದ ಪ್ರಮುಖ ದಿನಪತ್ರಿಕೆಯೊಂದರ ಪತ್ರಕರ್ತ-ಛಾಯಾಚಿತ್ರಕಾರ ರವಿ ಕನೋಜಿಯಾ ಝಾನ್ಸಿಯಲ್ಲಿ ಅಸುನೀಗಿದ ದುರ್ಘಟನೆ ವರದಿಯಾಗಿದೆ.
೩೪ ವರ್ಷದ ರವಿ ಕನೋಜಿಯಾ ರೈಲಿನ ಫೋಟೊ ತೆಗೆಯುವಾದ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಅಸು ನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿ ಸ್ಥಳದಲ್ಲೇ ಅಸುನೀಗಿದ್ದಾರೆ.
ರವಿ ಮರಣಕ್ಕೆ ಸಂತಾಪ ಸೂಚಿಸಿ ವಿಷಾದ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೃತನ ಕುಟುಂಬಕ್ಕಾಗಿ ೨೦ ಲಕ್ಷ ಧನಸಹಾಯ ಘೋಷಿಸಿದ್ದಾರೆ.


