
ನವದೆಹಲಿ: "ಉತ್ತರಾಖಾಂಡ್ ನಲ್ಲಿ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಕ್ಕೆ" ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿ ಸರ್ಕಾರ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
"ಉತ್ತರಾಖಾಂಡ್ ನಲ್ಲಿ ಅಸಂವಿಧಾತ್ಮಕ ಮತ್ತು ಪ್ರಜಾಸತ್ತಾತ್ಮಕವಲ್ಲದ ಕ್ರಮ ಜರುಗಿಸಿದ್ದಕ್ಕೆ" ನರೇಂದ್ರ ಮೋದಿ ಸರ್ಕಾರ ದೇಶದ ಕ್ಷಮೆ ಕೋರಬೇಕು ಎಂದು ಆಮ್ ಆದ್ಮಿ ಸರ್ಕಾರದ ಮುಖಂಡ ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ಉತ್ತರಾಖಾಂಡ್ ನಲ್ಲಿ ಹರೀಶ್ ರಾವತ್ ಸರ್ಕಾರ ಬಹುಮತ ಸಾಬೀತುಪಡಿಸಿದ ನಂತರ ಕೇಂದ್ರ ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸುವುದಾಗಿ ಕೋರ್ಟ್ ಗೆ ತಿಳಿಸಿದ ನಂತರ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.
ಕೇಜ್ರಿವಾಲ್ ನೆನ್ನೆಯಷ್ಟೇ "ಮೋದಿ ಸರ್ಕಾರಕ್ಕೆ ಇದು ಭಾರಿ ಹಿನ್ನಡೆ. ಇನ್ನಾದರೂ ರಾಜ್ಯ ಸರ್ಕಾರಗಳನ್ನು ಉರುಳಿಸುವುದನ್ನು ಮೋದಿ ನಿಲ್ಲಿಸುತ್ತಾರೆ ಎಂದು ನಂಬಿದ್ದೇನೆ" ಎಂದು ಟ್ವೀಟ್ ಮಾಡಿದ್ದರು.
Advertisement