ಇಬ್ಬರು ಭಾರತೀಯ ರಾಯಭಾರಿ ಅಧಿಕಾರಿಗಳನ್ನು ಉಚ್ಛಾಟಿಸಲು ಮುಂದಾದ ಪಾಕಿಸ್ತಾನ

ಇಸ್ಲಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಆರ್ ಎ ಡಬ್ಲ್ಯೂ ಏಜೆಂಟ್ ಗಳೆಂದು ದೂರಿ ಅವರನ್ನು ಉಚ್ಛಾಟಿಸಲು ಪಾಕಿಸ್ತಾನ ಬುಧವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್: ಇಸ್ಲಮಾಬಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಆರ್ ಎ ಡಬ್ಲ್ಯೂ ಏಜೆಂಟ್ ಗಳೆಂದು ದೂರಿ ಅವರನ್ನು ಉಚ್ಛಾಟಿಸಲು ಪಾಕಿಸ್ತಾನ ಬುಧವಾರ ಮುಂದಾಗಿದೆ. 
ಪಾಕಿಸ್ತಾನ ಟುಡೇ ವರದಿ ತಿಳಿಸಿರುವಂತೆ "ರಾಯಭಾರ ಅಧಿಕಾರಿಗಳ ವೇಷದಲ್ಲಿ, ಪಾಕಿಸ್ತಾನದಿಂದ ಉಗ್ರ ದಳವನ್ನು ಇಬ್ಬರು ಆರ್ ಎ ಡಬ್ಲ್ಯೂ ಏಜೆಂಟ್ ಗಳು ಮುನ್ನಡೆಸುತ್ತಿದ್ದಾರೆ" ಎಂದಿದೆ. 
ಈ ಇಬ್ಬರು ರಾಜೇಶ್ ಕುಮಾರ್ ಅಗ್ನಿಹೋತ್ರಿ ಮತ್ತು ಬಲೀರ್ ಸಿಂಗ್ ಎಂದು ತಿಳಿಯಲಾಗಿದೆ. ಅವರು ಕ್ರಮವಾಗಿ ಕಮರ್ಷಿಯಲ್ ಕೌಂಸೆಲ್ಲರ್ ಮತ್ತು ಮಾಧ್ಯಮ ಮಾಹಿತಿ ಕಾರ್ಯದರ್ಶಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 
"ಉಗ್ರ ಚಟುವಟಿಕೆಗಳಿಗೆ ಸಂಪನ್ಮೂಲ ಒದಗಿಸಿ ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಯೋಜನೆಯನ್ನು ಈ ಇಬ್ಬರು ರಾಯಭಾರಿ ಅಧಿಕಾರಿಗಳು ಹಾಕಿಕೊಂಡದ್ದು ಪತ್ತೆ ಹಚ್ಚಲಾಗಿದೆ" ಎಂದು ಮಾಧ್ಯಮ ವರದಿ ಮಾಡಿದೆ. 
ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಉಚ್ಛಾಟಿತರಾದ ಭಾರತೀಯ ರಾಯಭಾರಿ ಅಧಿಕಾರಿ ಸುರ್ಜಿತ್ ಸಿಂಗ್ ಕೂಡ ಈ ಕೂಟದಲ್ಲಿ ಭಾಗಿಯಾಗಿದ್ದರು ಎಂದು ಮಾಧ್ಯಮ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com