ಗಯಾದಲ್ಲಿ ಒಂದೇ ಸ್ವಾಭಾವಿಕ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಬಿಹಾರದ ಗಯಾದಲ್ಲಿ, ಮಹಿಳೆಯೊಬ್ಬರು ಸ್ವಾಭಾವಿಕ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗಯಾ: ಬಿಹಾರದ ಗಯಾದಲ್ಲಿ, ಮಹಿಳೆಯೊಬ್ಬರು ಸ್ವಾಭಾವಿಕ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. 
ಶುಕ್ರವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡದ್ದರಿಂದ ಪೂನಂ ಕುಮಾರಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ವಾಭಾವಿಕ ಹೆರಿಗೆ ಪ್ರಕ್ರಿಯೆಯಲ್ಲಿ ಅವರು ಮೂರೂ ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 
ಎರಡು ವರೆ ಘಂಟೆ ಅವಧಿಯಲ್ಲಿ ಈ ನಾಲ್ಕು ಮಕ್ಕಳು ಜನಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. 
"ಇದೆ ಮೊದಲ ಬಾರಿಗೆ ನಮ್ಮಲ್ಲಿ ಮಹಿಳೆಯೊಬ್ಬರು ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು. ಇದು ಒಳ್ಳೆಯ ಅನುಭವ" ಎಂದು ಅಭಿನೀತ್ ನರ್ಸಿಂಗ್ ಹೋಮ್ಸ್ ನ ಡಾ. ಅಮಿತಾ ಸಿನ್ಹಾ ಹೇಳಿದ್ದಾರೆ. 
ಪ್ರತಿ ಮಗುವಿನ ತೂಕ 1 ರಿಂದ 1.2 ಕೆಜಿ ಒಳಗಿದೆ ಎಂದು ತಿಳಿಯಲಾಗಿದೆ. ನಾಲ್ಕು ಮಕ್ಕಳ ಜನ್ಮ ವಿಷಯವನ್ನು ತಿಳಿದ ಜನರು ಆಸ್ಪತ್ರೆಯತ್ತ ಗುಂಪು ಗುಂಪಿನಲ್ಲಿ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ. 
ಇದಕ್ಕೂ ಮೊದಲು ವೈದ್ಯರು ತಿಳಿಸಿದ್ದಂತೆ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಬೇಕಿದ್ದರು, ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಕುಮಾರಿ ಅಚ್ಚರಿ ಮೂಡಿಸಿದ್ದಾರೆ "ಹಿಂದೆ ವೈದ್ಯರು ಪರೀಕ್ಷಿಸಿದ್ದಾಗ ಅಲ್ಟ್ರಾ ಸೌಂಡ್ ಪರೀಕ್ಷೆಯಲ್ಲಿ ಎರಡು ಮಕ್ಕಳಿರುವುದಾಗಿ ತಿಳಿಸಿದ್ದರು ಆದರೆ ನಾನು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದೇನೆ" ಎಂದು ಕುಮಾರಿ ಹೇಳಿದ್ದಾರೆ. 
ಹತ್ತಿರದ ಮಕ್ಕಳ ವಿಶೇಷ ಆಸ್ಪತ್ರೆಯಲ್ಲಿ ಹಸುಗೂಸುಗಳನ್ನು ಪರಿವೀಕ್ಷಣೆಯಲ್ಲಿ ಇಡಲಾಗಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com