ಸಾಂದರ್ಭಿಕ ಚಿತ್ರ
ಪ್ರಧಾನ ಸುದ್ದಿ
ಚಳಿಗಾಲ ಅಧಿವೇಶನಕ್ಕೂ ಮುಂಚಿತವಾಗಿ ನವೆಂಬರ್ ೧೫ ರಂದು ಸರ್ವಪಕ್ಷ ಸಭೆ
ಚಳಿಗಾಲದ ಅಧಿವೇಶನಕ್ಕೆ ಕಾರ್ಯಸೂಚಿ ಪಟ್ಟಿ ಮಾಡಲು ನವೆಂಬರ್ ೧೫ ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಒಂದು ದಿನದ ನಂತರ ಅಧಿವೇಶನ
ನವದೆಹಲಿ: ಚಳಿಗಾಲದ ಅಧಿವೇಶನಕ್ಕೆ ಕಾರ್ಯಸೂಚಿ ಪಟ್ಟಿ ಮಾಡಲು ನವೆಂಬರ್ ೧೫ ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ಒಂದು ದಿನದ ನಂತರ ಅಧಿವೇಶನ ಪ್ರಾರಂಭವಾಗಲಿದೆ.
ನವೆಂಬರ್ ೧೬ ರಿಂದ ಪ್ರಾಂಭವಾಗುವ ಅಧಿವೇಶದ ಗದ್ದಲದಿಂದ ಕೂಡಿರಲಿದೆ ಎಂದು ಅಂದಾಜಿಸಲಾಗಿದೆ. ನೋಟು ಹಿಂಪಡೆತ ನಿರ್ಧಾರ, ಭಯೋತ್ಪಾದಕರ ಮೇಲೆ ನಿರ್ಧಿಷ್ಟ ದಾಳಿ, ಕಾಶ್ಮೀರದ ಪರಿಸ್ಥಿತಿ ಇವೆಲ್ಲವೂ ಚರ್ಚೆಗೆ ಬಂದು ವಿಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ಸನ್ನದ್ಧವಾಗಿವೆ ಎನ್ನಲಾಗುತ್ತಿದೆ.
ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಈ ಸಭೆಯನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಅಧಿವೇಶನದಲ್ಲಿ ಒ ಆರ್ ಒ ಪಿ ವಿಷಯವನ್ನು ಪ್ರತಿಪಕ್ಷಗಳು ಎತ್ತಿ ಸರ್ಕಾರವನ್ನು ಪ್ರಶ್ನಿಸಲಿವೆ ಎನ್ನಲಾಗಿದೆ. ಡಿಸೆಂಬರ್ ೧೬ ಕ್ಕೆ ಚಳಿಗಾಲದ ಅಧಿವೇಶನ ಮುಕ್ತಾಯವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ