ದೇವಾಲಯದ ಹುಂಡಿ ಹಣಕ್ಕಿಲ್ಲ ತೆರಿಗೆ ಸಂಕಷ್ಟ: ಸರ್ಕಾರದ ಸ್ಪಷ್ಟೀಕರಣ

ದೇವಾಲಯದ ಹುಂಡಿಗಳಿಗೆ ಭಕ್ತಾದಿಗಳು ಹಾಕುವ ಹಣ ತೆರಿಗೆ ಕಣ್ಗಾವಲಿನ ಪರಿಧಿಯಲ್ಲಿ ಬರುವುದಿಲ್ಲ ಎಂದು ವಿತ್ತ ಸಚಿವಾಲಯದ ಅಧಿಕಾರಿ ಗುರುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇವಾಲಯದ ಹುಂಡಿಗಳಿಗೆ ಭಕ್ತಾದಿಗಳು ಹಾಕುವ ಹಣ ತೆರಿಗೆ ಕಣ್ಗಾವಲಿನ ಪರಿಧಿಯಲ್ಲಿ ಬರುವುದಿಲ್ಲ ಎಂದು ವಿತ್ತ ಸಚಿವಾಲಯದ ಅಧಿಕಾರಿ ಗುರುವಾರ ಹೇಳಿದ್ದಾರೆ. 
"ದೇವಾಲಯಗಳಿಗೆ, ಹುಂಡಿಗಳಿಂದ ಬರುವ ಹಣಕ್ಕೆ ರಿಯಾಯಿತಿ ಇರುತ್ತದೆ ಮತ್ತು ನಾವು ಅದನ್ನು ಪ್ರಶ್ನಿಸುವುದಿಲ್ಲ. ಮತ್ತು ಈ ಮೂಲದಿಂದ ಮಾಡುವ ಜಮಾಗೆ ಯಾವುದೇ ನಿರ್ಬಂಧವಿರುವುದಿಲ್ಲ" ಎಂದು ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್ ಅಧಿಯ ಹೇಳಿದ್ದಾರೆ.
ಆದರೆ ದೇವಾಲಯಗಳ ಧರ್ಮಾರ್ಥ ಟ್ರಸ್ಟ್ ಗಳಿಗೆ ಬರುವ ದೇಣಿಗೆಗೆ ಯಾವುದೇ ರಿಯಾಯಿತಿ ಇರದೆ, ಅದಕ್ಕೆ ಭಕ್ತಾದಿಗಳು ನೀಡುವ ದಾಖಲೆಗಳನ್ನು ಅವರು ಇಟ್ಟುಕೊಳ್ಳಬೇಕಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. 
"ದೇವಾಲಯಗಳಲ್ಲಿ ಟ್ರಸ್ಟ್ ಗಳಿರುತ್ತವೆ. ಕೆಲವು ಧರ್ಮಾರ್ಥ ಟ್ರಸ್ಟ್ ಗಳು.. ಅವುಗಳಿಗೆ ನಿರ್ಬಂಧನೆ ಇದೆ. ಅಲ್ಲಿ ದೇಣಿಗೆ ತೆಗೆದುಕೊಂಡರೆ, ಅದನ್ನು ನೀಡಿದ ವ್ಯಕ್ತಿಯ ಹೆಸರು ಮತ್ತು ವಿಳಾಸ ನಮೂದಿಸಬೇಕಾಗುತ್ತದೆ. ಇದು ಎಲ್ಲಾ ಧರ್ಮಾರ್ಥ ಟ್ರಸ್ಟ್ ಗಳಿಗೂ ಸಂಬಂಧಿಸುತ್ತದೆ" ಎಂದು ಅಧಿಕಾರಿ ಹೇಳಿದ್ದಾರೆ. 
ನವೆಂಬರ್ ೮ ರಿಂದ ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮೌಲ್ಯದ ನೋಟುಗಳನ್ನು ಹಿಂಪಡೆದಿದ್ದು, ಅವುಗಳನ್ನು ನಿಯಮಿತವಾಗಿ ಬದಲಿಸಿಕೊಳ್ಳುವ ಅವಕಾಶ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com