ಡಿ ಎಂ ಕೆ ಮುಖಂಡ ಸ್ಟಾಲಿನ್
ಡಿ ಎಂ ಕೆ ಮುಖಂಡ ಸ್ಟಾಲಿನ್

ಜನರ ತೊಂದರೆಯ ಬಗ್ಗೆ ಸಹಾನುಭೂತಿ ಕೂಡ ತೋರಿಸದ ಜಯಲಲಿತಾ: ಸ್ಟಾಲಿನ್

ತಮಿಳುನಾಡು ವಿಧಾನಸಭಾ ವಿರೋಧಪಕ್ಷದ ಅಧ್ಯಕ್ಷ, ಡಿ ಎಂ ಕೆ ಮುಖಂಡ ಸ್ಟಾಲಿನ್, ನೋಟು ಹಿಂಪಡೆತದಿಂದ ತೊಂದರೆಗೆ ಒಳಗಾಗಿರುವ ಜನರ ತೊಂದರೆಗಳಿಗೆ ಮುಖ್ಯಮಂತ್ರಿ ಜಯಲಲಿತಾ
Published on
ಚೆನ್ನೈ: ತಮಿಳುನಾಡು ವಿಧಾನಸಭಾ ವಿರೋಧಪಕ್ಷದ ಅಧ್ಯಕ್ಷ, ಡಿ ಎಂ ಕೆ ಮುಖಂಡ ಸ್ಟಾಲಿನ್, ನೋಟು ಹಿಂಪಡೆತದಿಂದ ತೊಂದರೆಗೆ ಒಳಗಾಗಿರುವ ಜನರ ತೊಂದರೆಗಳಿಗೆ ಮುಖ್ಯಮಂತ್ರಿ ಜಯಲಲಿತಾ ಸಹಾನುಭೂತಿ ಕೊಡ ತೋರಿಸದೆ, ಕೇವಲ ಮತಗಳ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 
ಭಾನುವಾರ ಜಯಲಲಿತಾ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸ್ಟಾಲಿನ್ ಜನರಿಗೆ ಸದ್ಯಕ್ಕೆ ಹಣ ದೊರೆಯದೆ ಅಗತ್ಯ ವಸ್ತುಗಳನ್ನು ಕೂಡ ಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ ಮತ್ತು ಮುಖ್ಯಮಂತ್ರಿಯವರ ಮಾತುಗಳು ಜನರ ಈ ತೊಂದರೆಗೆ ಸಮಾಧಾನ ಕೂಡ ಹೇಳುವುದಿಲ್ಲ ಎಂದಿದ್ದಾರೆ. 
ಭಾನುವಾರ ಹೇಳಿಕೆ ನೀಡಿದ್ದ ಜಯಲಲಿತಾ, ಜನರ ಪ್ರಾರ್ಥನೆಯಿಂದಾಗಿ ಮರುಹುಟ್ಟು ಪಡೆದಿದ್ದೇನೆ ಎಂದಿದ್ದಲ್ಲದೆ ಮುಂದಿನ ಉಪ ಚುನಾವಣೆಗಳಲ್ಲಿ ಎ ಐ ಡಿ ಎಂ ಕೆ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಜನರಲ್ಲಿ ಕೋರಿದ್ದರು. 
ಶೀಘ್ರ ಸಂಪೂರ್ಣ ಗುಣಮುಖವಾಗಿ ಮತ್ತೆ ಕೆಲಸಕ್ಕೆ ಹಾಜರಾಗಲು ಕಾಯುತ್ತಿದ್ದೇನೆ ಎಂದು ಕೂಡ ಅವರು ಹೇಳಿದ್ದರು. ಸೆಪ್ಟೆಂಬರ್ ೨೨ ರಿಂದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರನ್ನು ಇನ್ನು ಡಿಸ್ಚಾರ್ಜ್ ಮಾಡಬೇಕಿದೆ. 
ಕೇಂದ್ರ ಸರ್ಕಾರದ ನೋಟು ಹಿಂಪಡೆತದ ನಿರ್ಧಾರವನ್ನು ಸ್ವಾಗತಿಸಿದ್ದರು ಇದರಿಂದ ಸಮಾನ್ಯ ಜನಕ್ಕೆ ಸಾಕಷ್ಟು ತೊಂದರೆಗಳಾಗಿವೆ ಎಂದಿದ್ದಾರೆ ಸ್ಟಾಲಿನ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com