ಕಾಣೆಯಾದ ಜೆ ಎನ್ ಯು ವಿದ್ಯಾರ್ಥಿಯ ಸುಳಿವಿಗೆ ಬಹುಮಾನ ಮೌಲ್ಯ ಹೆಚ್ಚಿಸಿದ ಪೊಲೀಸರು

ಒಂದು ತಿಂಗಳಿಂದ ಕಾಣೆಯಾಗಿರುವ ಜವಾಹಾರ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ನಜೀಬ್ ಅಹಮದ್ ಅವರ ಬಗ್ಗೆ ಮಾಹಿತಿ ನೀಡಿದರೆ ಈ ಮೊದಲು ೨ ಲಕ್ಷ ರೂ ಬಹುಮಾನ ಕೊಡುವುದಾಗಿ ಘೋಷಿಸಿದ್ದ ದೆಹಲಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಒಂದು ತಿಂಗಳಿಂದ ಕಾಣೆಯಾಗಿರುವ ಜವಾಹಾರ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ನಜೀಬ್ ಅಹಮದ್ ಅವರ ಬಗ್ಗೆ ಮಾಹಿತಿ ನೀಡಿದರೆ ಈ ಮೊದಲು ೨ ಲಕ್ಷ ರೂ ಬಹುಮಾನ ಕೊಡುವುದಾಗಿ ಘೋಷಿಸಿದ್ದ ದೆಹಲಿ ಪೊಲೀಸರು ಈಗ ಅದನ್ನು ೫ ಲಕ್ಷಕ್ಕೆ ಹೆಚ್ಚಿಸಿದ್ದಾರೆ. 
"ಈ ಆದೇಶ ಈಗಿನಿಂದಲೇ ಜಾರಿಯಾಗಿದ್ದು, ಈ ಪ್ರಕರಣ ಬಗೆಹರಿಯುವವರೆಗೂ ಅಥವಾ ಕಾಣೆಯಾದ ವ್ಯಕ್ತಿಯನ್ನು ಕಂಡುಹಿಡಿಯುವವರೆಗೂ ಪ್ರಮಾಣದಲ್ಲಿರುತ್ತದೆ" ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. 
"ಕಾಣೆಯಾದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಆದರೆ ಯಾವ ಸುಳಿವು ಸಿಕ್ಕಿಲ್ಲ" ಎಂದು ಹೇಳಿಕೆ ತಿಳಿಸಿದೆ. 
ಕಳೆದ ವಾರ ಈ ಪ್ರಕರಣವನ್ನು ದಕ್ಷಿಣ ದೆಹಲಿ ಪೊಲೀಸರಿಂದ ತೀವ್ರ ತನಿಖೆಗಾಗಿ ಕ್ರೈಮ್ ಬ್ರಾಂಚ್ ಗೆ ವರ್ಗಾಯಿಸಲಾಗಿತ್ತು. 
"ನಜೀಬ್ ಅಹಮದ್ ಬಗ್ಗೆ ಸುಳಿವು ನೀಡುವವರಿಗೆ ಸಿಗುವ ಬಹುಮಾನ ಮೊತ್ತವನ್ನು ೫ ಲಕ್ಷಕ್ಕೆ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೆಚ್ಚಿಸಿದ್ದಾರೆ" ಎಂದು ಜಂಟಿ ಪೊಲೀಸ್ ಆಯುಕ್ತ (ಕ್ರೈಮ್ ಘಟಕ) ಧೃಢೀಕರಿಸಿದ್ದಾರೆ. 
ಮೊದಲ ವರ್ಷದ ಎಂ ಎಸ್ ಸಿ ಬಯೋಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಜಂಗ್ ಅಕ್ಟೋಬರ್ ೧೫ ರಂದು ಆರ್ ಎಸ್ ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಸದಸ್ಯರ ಜೊತೆಗೆ ಘರ್ಷಣೆ ಮಾಡಿಕೊಂಡ ನಂತರ ಕಾಣೆಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com