ಕಿಡ್ನಿ ವೈಫಲ್ಯ; ದಾನಿಯ ನಿರೀಕ್ಷೆಯಲ್ಲಿ ಸುಶ್ಮಾ ಸ್ವರಾಜ್

ಕಿಡ್ನಿ ವೈಫಲ್ಯದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್, ಅವರ ರಕ್ತವನ್ನು ಹೋಲುವ ದಾನಿ ಸಿಗುವುದಕ್ಕೆ
ಸುಶ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ಸುಶ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ನವದೆಹಲಿ: ಕಿಡ್ನಿ ವೈಫಲ್ಯದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್, ಅವರ ರಕ್ತವನ್ನು ಹೋಲುವ ದಾನಿ ಸಿಗುವುದಕ್ಕೆ ಇನ್ನು ೧೫-೩೦ ದಿನಗಳವರೆಗೆ ಕಾಯುವ ಅವಶ್ಯಕತೆ ಇದೆ ಎನ್ನುತ್ತವೆ ಮೂಲಗಳು. 
"ಕಿಡ್ನಿ ಕಸಿಗೂ ಮುಂಚಿತವಾಗಿ ಸುಶ್ಮಾ ಸ್ವರಾಜ್ ಹಲವಾರು ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇಂದು (ಬುಧವಾರ) ಅವರು ಮನೆಗೆ ಹೋಗಿದ್ದಾರೆ ಆದರೆ ಮುಂದಿನ ಪರೀಕ್ಷೆಗಳಿಗೆ ನಾಳೆ ಹಿಂದಿರುಗಳಿದ್ದಾರೆ" ಎಂದು ಮೂಲಗಳು ತಿಳಿಸಿವೆ. 
೬೪ ವರ್ಷದ ಸುಶ್ಮಾ ಡಯಾಬೆಟಿಸ್ ನಿಂದ ಕೂಡ ನರಳುತ್ತಿದ್ದು ಸದ್ಯಕ್ಕೆ ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ನವೆಂಬರ್ ೭ ರಂದು ಎಐಐಎಂಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 
"ಸದ್ಯಕ್ಕೆ ಅವರಿಗೆ ದಾನಿಯ ಅವಶ್ಯಕತೆ ಇದೆ. ಅವರ ರಕ್ತಸಂಬಂಧಿಗಳಿಗೆ ಆದ್ಯತೆಯಿರುತ್ತದೆ. ಅವರ ಮಗಳು ಕೊಡಬಹುದಾಗಿದ್ದರು, ಅವರಿಗೂ ಡಯಾಬೆಟಿಸ್ ಸಮಸ್ಯೆ ಇದೆ, ಆದುದರಿಂದ ಅದು ಅಸಾಧ್ಯ" ಎಂದು ಮೂಲಗಳು ತಿಳಿಸಿವೆ. 
ಬುಧವಾರ ಟ್ವೀಟ್ ಮಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ "ಕಿಡ್ನಿ ವೈಫಲ್ಯದಿಂದ ನಾನು ಎಐಐಎಂಎಸ್ ನಲ್ಲಿದ್ದೇನೆ. ಕಿಡ್ನಿ ಕಸಿಗಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ. ಕೃಷ್ಣ ಆಶೀರ್ವದಿಸಲಿದ್ದಾನೆ" ಎಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com