ಫೆಬ್ರವರಿ ೬ ರೊಳಗೆ ೬೦೦ ಕೋಟಿ ಜಮಾ ಮಾಡಿ ಇಲ್ಲವೇ ಶರಣಾಗತರಾಗಿ: ಸುಬ್ರತೊ ರಾಯ್ ಗೆ ಸುಪ್ರೀಂ

ಜೈಲಿನಿನಿಂದ ಜಾಮೀನಿನ ಮೇಲೆ ಹೊರಗಿರಬೇಕಾದರೆ ಸೆಬಿ-ಸಹರಾ ಹಿಂಪಡೆತ ಖಾತೆಯಲ್ಲಿ ಫೆಬ್ರವರಿ ೬ರೊಳಗೆ ೬೦೦ ಕೋಟಿ ರೂ ಜಮಾ ಮಾಡಿ ತಪ್ಪಿದರೆ ಜೈಲಿಗೆ ಹಿಂದಿರುಗಲು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜೈಲಿನಿನಿಂದ ಜಾಮೀನಿನ ಮೇಲೆ ಹೊರಗಿರಬೇಕಾದರೆ ಸೆಬಿ-ಸಹರಾ ಹಿಂಪಡೆತ ಖಾತೆಯಲ್ಲಿ ಫೆಬ್ರವರಿ ೬ರೊಳಗೆ ೬೦೦ ಕೋಟಿ ರೂ ಜಮಾ ಮಾಡಿ ತಪ್ಪಿದರೆ ಜೈಲಿಗೆ ಹಿಂದಿರುಗಲು ಸಿದ್ಧರಾಗಿ ಎಂದು ಸಹರಾ ಉದ್ದಿಮೆ ಸಮೂಹದ ಅಧ್ಯಕ್ಷ ಸುಬ್ರತಾ ರಾಯ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ಎಚ್ಚರಿಸಿದೆ. 
ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್, ನ್ಯಾಯಾಧೀಶ ರಂಜನ್ ಗೊಗೋಯ್ ಮತ್ತು ಎ ಕೆ ಸಿಕ್ರಿ ಇವರುಗಳನ್ನು ಒಳಗೊಂಡ ನ್ಯಾಯಪೀಠ, ಸಹರಾ ಸಮೂಹದ ಆಸ್ತಿಯನ್ನು ಮಾರಿ ಹೂಡಿಕೆದಾರರಿಗೆ ಅವರ ಹಣ ಹಿಂದಿರುಗಿಸದೆ ಹೋದರೆ ಅದಕ್ಕಾಗಿ ನಾವು ಒಬ್ಬರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಕೂಡ ಹೇಳಿದೆ.
"ನಿಮಗೆ (ಸಹರಾ ಸಮೂಹ) ನಿಮ್ಮ ಆಸ್ತಿಯನ್ನು ಮಾರಲು ಸಾಧ್ಯವಾಗದೆ ಹೋದರೆ, ಅದಕ್ಕಾಗಿ ಒಬ್ಬ ಸ್ವೀಕೃತದಾರನನ್ನು ನಾವು ನೇಮಿಸುತ್ತೇವೆ" ಎಂದು ನ್ಯಾಯಪೀಠ ಹೇಳಿದೆ. 
ಇದಕ್ಕೂ ಮೊದಲು ರಾಯ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಸೆಬಿ ಖಾತೆಯಲ್ಲಿ ೨ ತಿಂಗಳೊಳಗೆ ೧೦೦೦ ಕೋಟಿ ಜಮಾ ಮಾಡುವಂತೆ ತಿಳಿಸಿತ್ತು, ಆದರೆ ನಂತರ ಫೆಬ್ರವರಿ ೬, ೨೦೧೭ ರೊಳಗೆ ೬೦೦ ಕೋಟಿ ಜಮಾ ಮಾಡುವಂತೆ ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com