ನಗದು ಬಿಕ್ಕಟ್ಟು; ಮಣಿಪುರದಲ್ಲಿ ಬ್ಯಾಂಕ್ ಗಳು ಧ್ವಂಸ

ನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಂಫಾಲ್: ನಗದು ಇಲ್ಲ ಎಂಬ ಕಾರಣ ನೀಡಿ, ಮಿತಿಯಿರುವ ೨೪೦೦೦ ರೂ ದುಡ್ಡು ಕೂಡ ಹಿಂಪಡೆಯಲು ಬಿಡದ ಎಸ್ ಬಿ ಐ ಬ್ಯಾಂಕ್ ಘಟಕಗಳ ಮೇಲೆ ಕುಪಿತಗೊಂಡ ಗ್ರಾಹಕರು ದಾಳಿ ಮಾಡಿ ಧ್ವಂಸಗೊಳಿಸಿದ ಘಟನೆಗಳು ಮಣಿಪುರದಲ್ಲಿ ದಾಖಲಾಗಿವೆ. 
ಒಂದು ಕಡೆ ನಡೆದ ಗಲಭೆಯಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಗಾಯವಾಗಿದೆ. ಮತ್ತೊಂದು ಕಡೆ ಬ್ಯಾಂಕ್ ನ ಕಿಟಕಿ ಮತ್ತು ಬಾಗಿಲಿನ ಗಾಜುಗಳನ್ನು ಒಡೆಯಲಾಗಿದೆ. ಈ ಘಟನೆಗಳಲಿಗೆ ಸಂಬಂಧಿಸದಂತೆ ಯಾರನ್ನು ಬಂಧಿಸಲಾಗಿಲ್ಲ. 
ಮಣಿಪುರ ವಿಶ್ವವಿದ್ಯಾಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘಟಕದಲ್ಲಿ, ೨೪೦೦೦ ರೂ ಹಣ ಹಿಂಪಡೆಯಲು ನಿರಾಕರಿಸಿರುವುದರಿಂದ ಈ ಗಲಾಟೆಗೆ ಕಾರಣವಾಗಿದೆ. 
ವಾರಕ್ಕೆ ೨೪೦೦೦ ರೂ ಹಿಂಪಡೆಯುವ ಅವಕಾಶವನ್ನು ಆರ್ ಬಿ ಐ ನೀಡಿದ್ದರು, ನಗದು ಮುಗಿದುಹೋಗುತ್ತಿರುವ ಕಾರಣ ಬ್ಯಾಂಕ್ ಗಳು ಆ ಮೊತ್ತವನ್ನು ನೀಡಲು ನಿರಾಕರಿಸುತ್ತಿರುವುದು ಸಾಮಾನ್ಯವಾಗಿದೆ. 
ನವೆಂಬರ್ ೮ ರಿಂದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕ್ರಮವನ್ನು ಕೇಂದ್ರ ಸರ್ಕಾರ ಘೋಷಿಸಿದ್ದಾಗಿಲಿಂದಲೂ ದೇಶದಾದ್ಯಂತ ಜನ ತಮ್ಮ ಹಣ ಪಡೆಯಲು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಗಳು ಸಾಮಾನ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com