ಮೋದಿಗೆ ಎಚ್ಚರಿಕೆ ಟಿಪ್ಪಣಿ ಹೊತ್ತಿದ್ದ ಪಾರಿವಾಳ ಭಾರತೀಯ ಪೊಲೀಸರು ವಶ

ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ನೀಡುವ ಟಿಪ್ಪಣಿ ಹೊತ್ತಿದ್ದ ಪಾರಿವಾಳವೊಂದನ್ನು ಭಾರತೀಯ ಪೊಲೀಸರು ಸೋಮವಾರ ವಶಕ್ಕೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ನೀಡುವ ಟಿಪ್ಪಣಿ ಹೊತ್ತಿದ್ದ ಪಾರಿವಾಳವೊಂದನ್ನು ಭಾರತೀಯ ಪೊಲೀಸರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ. 
ಪಂಜಾಬಿನ ಪಠಾಣ್ ಕೋಟ್ ನಲ್ಲಿ ಈ ಪಕ್ಷಿ ಕಂಡುಬಂದಿದ್ದು, ಗಡಿ ಭದ್ರತಾ ಪಡೆ(ಬಿ ಎಸ್ ಎಫ್) ಅದನ್ನು ವಶಕ್ಕೆ ಪಡೆದಿದೆ. ಕಳೆದ ಜನವರಿಯಲ್ಲಿ ಇದೆ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಉಗ್ರರು ಭಾರತೀಯ ವಾಯುಪಡೆಯ ನೆಲೆಯ ಮೇಲೆ ದಾಳಿ ನಡೆಸಿದ್ದರು. 
ಕಳೆದ ಸಂಜೆ ನಾವು ಪಕ್ಷಿಯನ್ನು ವಶಕ್ಕೆ ಪಡೆದಿದ್ದೇವೆ" ಎಂದು ಪಠಾಣ್ ಕೋಟ್ ಪೊಲೀಸ್ ಇನ್ಸ್ಪೆಕ್ಟರ್ ರಾಕೇಶ್ ಕುಮಾರ್ ಹೇಳಿದ್ದಾರೆ. 
"ಮೋದಿ, ನಾವು 1971 ರಲ್ಲಿದ ಜನಗಳು ಅಲ್ಲ. ಈಗ ಮಕ್ಕಳನ್ನು ಸೇರಿಸಿ ಪ್ರತಿಯೊಬ್ಬರೂ ಭಾರತದ ವಿರುದ್ಧ ಹೋರಾಡಲು ಸಿದ್ಧವಾಗಿದ್ದಾರೆ ಎಂದು ಉರ್ದುವಿನಲ್ಲಿ ಬರೆದಿದ್ದ ಟಿಪ್ಪಣಿ ಬಿ ಎಸ್ ಎಫ್ ಗೆ ಸಿಕ್ಕಿದೆ" ಎಂದು ಕುಮಾರ್ ಹೇಳಿದ್ದಾರೆ.
1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭೀಕರ ಕಾಳಗ ನಡೆದಿತ್ತು. 
ಈ ಟಿಪ್ಪಣಿಯಲ್ಲಿ ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆ ಲಷ್ಕರ್ ಎ ತೈಬಾ ಸಂಘಟನೆಯ ಸಹಿ ಇದೆ "ಆದುದರಿಂದ ಈ ಪ್ರಕರಣವನ್ನು ಗಂಭಿರವಾಗಿ ತನಿಖೆ ಮಾಡುತ್ತಿದ್ದೇವೆ" ಎಂದು ಕುಮಾರ್ ಹೇಳಿದ್ದಾರೆ. 
ನೆನ್ನೆಯಷ್ಟೇ ಮೋದಿ ವಿರುದ್ಧ ಘೋಷಣೆ ಬರೆದಿದ್ದ ಎರಡು ಬಲೂನ್ ಗಳು ಪಂಜಾಬಿನಲ್ಲಿ ಸಿಕ್ಕಿದ್ದವು. ಈ ಹಿಂದೆ ಸ್ಪೈ ಕ್ಯಾಮರಾಗಳನ್ನು ಹೊತ್ತಿದ್ದ ಪಾರಿವಾರಗಳನ್ನು ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com