ಬಿಡಿ ಸಿಗರೇಟ್ ಗಳ ಮಾರಾಟಕ್ಕೆ ಹಿಮಾಚಲದಲ್ಲಿ ನಿಷೇಧ; ಇಂದಿನಿಂದ ಜಾರಿ

ಯುವ ಜನತೆಯನ್ನು ಧೂಮಪಾನ ಮತ್ತು ತಂಬಾಕಿನಿಂದ ದೂರ ಉಳಿಯುವಂತೆ ಉತ್ತೇಜಿಸುವ ಕ್ರಮದಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಡಿ ಸಿಗರೇಟ್ ಮತ್ತು ಬೀಡಿಗಳನ್ನು ಮಾರಾಟ ಮಾಡುವುದನ್ನು ಇಂದಿನಿಂದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶಿಮ್ಲಾ: ಯುವ ಜನತೆಯನ್ನು ಧೂಮಪಾನ ಮತ್ತು ತಂಬಾಕಿನಿಂದ ದೂರ ಉಳಿಯುವಂತೆ ಉತ್ತೇಜಿಸುವ ಕ್ರಮದಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಡಿ ಸಿಗರೇಟ್ ಮತ್ತು ಬೀಡಿಗಳನ್ನು ಮಾರಾಟ ಮಾಡುವುದನ್ನು ಇಂದಿನಿಂದ ನಿಷೇಧಿಸಲಾಗಿದೆ. ಈ ಕಾಯ್ದೆ ಕಳೆದ ಮುಂಗಾರು ಅಧಿವೇಶನದಲ್ಲಿ ಮಂಜೂರಾಗಿತ್ತು ಮತ್ತು ರಾಜ್ಯಪಾಲರಿಂದ ಒಪ್ಪಿಗೆಯೂ ಸಿಕ್ಕಿತ್ತು. 
ಈ ಕಾಯ್ದೆಯ ಪ್ರಕಾರ ಬಿಡಿ ಸಿಗರೇಟ್ ಮತ್ತು ಬೀಡಿಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರು ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕಿದೆ. ಇದನ್ನು ಉಲ್ಲಂಘಿಸಿದವರಿಗೆ ಮೊದಲ ಬಾರಿಗೆ 50 ಸಾವಿರು ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆ, ನಂತರದ ಉಲ್ಲಂಘನೆಗಳಿಗೆ 1 ಲಕ್ಷ ರು ದಂಡ ಮತ್ತು ಒಂದು ವರ್ಷದವರೆಗೆ ಜೈಲು ಸಜೆ ನೀಡಲಾಗುತ್ತದೆ. 
ನೊಂದಣಿಯಿಲ್ಲದೆ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ ಮೊದಲ ಬಾರಿಗೆ 10 ಸಾವಿರ ರೂ ದಂಡ ಮತ್ತು ನಂತರ ಉಲ್ಲಂಘನೆಗಳಿಗೆ 15 ಸಾವಿರ ರೂ ದಂಡ ವಿಧಿಸಲಾಗುತ್ತದೆ. 
ಈ ಕಾಯ್ದೆಯಡಿ ಉಪ ಸಬ್ ಇನ್ಸ್ಪೆಕ್ಟರ್ ಮೇಲ್ಪಟ್ಟ ಯಾವುದೇ ಪೊಲೀಸ್ ಅಧಿಕಾರಿ ಅಥವಾ ರಾಜ್ಯ ಸರ್ಕಾರ ಪರವಾನಗಿ ನೀಡಿರುವ ಅಧಿಕಾರಿಗಳು ಉಲ್ಲಂಘನೆಯ ಸಂಶಯ ಬಂದಲ್ಲಿ ದಾಳಿ ಮಾಡುವ ಅಧಿಕಾರ ಹೊಂದಿರುತ್ತಾರೆ. 
ತಂಬಾಕು ಉತ್ಪನ್ನಗಳ ಸೇವನೆಯನ್ನು ತಗ್ಗಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೌಲ್ ಸಿಂಗ್ ಠಾಕುರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com