ಯಾವುದೇ ಸವಾಲಿಗೂ ನಾವು ಸಿದ್ಧರಿದ್ದೇವೆ: ಭಾರತೀಯ ವಾಯುಪಡೆ ಮುಖ್ಯಸ್ಥ

"ಯಾವುದೇ ಸವಾಲಿಗೆ ಪರಿಣಾಮಕಾರಿಯಾಗಿ ಉತ್ತರಿಸಲು" ಭಾರತೀಯ ವಾಯುಪಡೆ ಸನ್ನದ್ಧವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ ಶನಿವಾರ ಹೇಳಿದ್ದಾರೆ.
ಭಾರತೀಯ ವಾಯುಪಡೆ ಮುಖ್ಯಸ್ಥ ಅರುಪ್ ರಾಹಾ
ಭಾರತೀಯ ವಾಯುಪಡೆ ಮುಖ್ಯಸ್ಥ ಅರುಪ್ ರಾಹಾ
Updated on
ನವದೆಹಲಿ: "ಯಾವುದೇ ಸವಾಲಿಗೆ ಪರಿಣಾಮಕಾರಿಯಾಗಿ ಉತ್ತರಿಸಲು" ಭಾರತೀಯ ವಾಯುಪಡೆ ಸನ್ನದ್ಧವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ ಶನಿವಾರ ಹೇಳಿದ್ದಾರೆ. 
ಐ ಎ ಎಫ್ ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಸಂದೇಶ ನೀಡಿರುವ ಅವರು ಭಾರತೀಯ ವಾಯುಪಡೆ ಅತ್ಯಂತ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ ಮತ್ತು ಆಕಾಶದಲ್ಲಿ ಕಣ್ಗಾವಲನ್ನು ಸದಾ ಇರಿಸಿದೆ ಎಂದಿದ್ದಾರೆ. 
"ಯಾವುದೇ ಸವಾಲನ್ನು ಬಹಳ ಪರಿಣಾಮಕಾರಿಯಾಗಿ ಎದುರಿಸುವ ತರಬೇತಿಯನ್ನು ಸದಾ ಜಾರಿಯಲ್ಲಿಟ್ಟಿರುತ್ತೇವೆ" ಎಂದು ಕೂಡ ಐ ಎ ಆಫ್ ಮುಖ್ಯಸ್ಥ ಹೇಳಿದ್ದಾರೆ. 
ಇಂದು ಶನಿವಾರ 84 ನೇ ಏರ್ ಫೋರ್ಸ್ ಡೇ ಆಗಿದ್ದು, ಐ ಎ ಎಫ್ ನ ಅಧಿಕೃತ ಫೇಸ್ಬುಕ್ ಪುಟಕ್ಕೆ ಚಾಲನೆ ನೀಡಲಾಗಿದೆ. 1932 ಅಕ್ಟೋಬರ್ 8 ರಂದು ಭಾರತೀಯ ವಾಯುಪಡೆಯನ್ನು ಸ್ಥಾಪಿಸಲಾಗಿತ್ತು. ಈ ನೆನಪಿನಲ್ಲಿ ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com