ಈ ವಿಷಯವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಕರುಣಾನಿಧಿ, ಜಯಲಲಿತಾ ಕಳೆದ 19 ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ ಮತ್ತು ಅವರು ಇನ್ನು ಹೆಚ್ಚು ದಿನಗಳವರೆಗೆ ಅಲ್ಲಿರುವಂತೆ ಸೂಚಿಸಲಾಗಿದೆ. ತಮಿಳು ನಾಡು ರಾಜ್ಯಪಾಲ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಮತ್ತಿತರ ಮುಖಂಡರಿಗೆ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಕೂಡ ಅವಕಾಶ ನೀಡಿಲ್ಲ.