ವಿಶ್ವದ ಅತಿ ಹಿರಿಯ 38 ವರ್ಷದ ಪಾಂಡಾ ಹಾಂಕಾಂಗ್ ನಲ್ಲಿ ನಿಧನ

ವಿಶ್ವದ ಅತಿ ಹೆಚ್ಚು ವಯಸ್ಸಿನ ಪಾಂಡಾ, 38 ವರ್ಷದ ಜಿಯಾ ಜಿಯಾ, ಮೃಗಾಲಯದಲ್ಲಿ ನಿಧಾನವಾಗಿದೆ. ಇದು ಮನುಷ್ಯ 114 ವರ್ಷ ಬದುಕುವುದಕ್ಕೆ ಸಮ ಎನ್ನಲಾಗಿದೆ.
ತನ್ನ 37 ನೇ ಹುಟ್ಟುಹಬ್ಬದಲ್ಲಿ ಜಿಯಾ ಜಿಯಾ ಪಾಂಡಾ
ತನ್ನ 37 ನೇ ಹುಟ್ಟುಹಬ್ಬದಲ್ಲಿ ಜಿಯಾ ಜಿಯಾ ಪಾಂಡಾ
ಹಾಂಕಾಂಗ್: ವಿಶ್ವದ ಅತಿ ಹೆಚ್ಚು ವಯಸ್ಸಿನ ಪಾಂಡಾ, 38 ವರ್ಷದ ಜಿಯಾ ಜಿಯಾ, ಮೃಗಾಲಯದಲ್ಲಿ ನಿಧಾನವಾಗಿದೆ. ಇದು ಮನುಷ್ಯ 114 ವರ್ಷ ಬದುಕುವುದಕ್ಕೆ ಸಮ ಎನ್ನಲಾಗಿದೆ. 
ಕಳೆದ ಎರಡು ವಾರಗಳಲ್ಲಿ ಈ ಪಾಂಡಾದ ಆರೋಗ್ಯ ತೀವ್ರವಾಗಿ ಕಳೆಗುಂದಿದ್ದಕ್ಕೆ ಈ ಹೆಣ್ಣು ಪಾಂಡಾಗೆ ದಯಾಮರಣ ಕಲ್ಪಿಸಲಾಗಿದೆ ಎಂದು ಜಿಯಾ ಜಿಯಾ ಇದ್ದ ಓಷನ್ ಪಾರ್ಕ್ ನ ಅಧಿಕಾರಿಗಳು ಹೇಳಿದ್ದಾರೆ. 
ಕಳೆದ ಒಂದು ವಾರದಿಂದ ಅದರ ಆಹಾರ ಸೇವನೆ ಗಣನೀಯವಾಗಿ ಕುಸಿದಿತ್ತು. 10 ಕೆಜಿ ಆಹಾರ ತಿನ್ನುತ್ತಿದ್ದ ಜಿಯಾ ಜಿಯಾ ಕೇವಲ 3 ಕೆಜಿ ಆಹಾರ ಸೇವಿಸುತ್ತಿದ್ದರಿಂದ ತನ್ನ ತೂಕವನ್ನು ನಾಲ್ಕು ಕೆಜಿ ಕಳೆದುಕೊಂಡಿತ್ತು ಎಂದು ಓಷನ್ ಪಾರ್ಕ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. 
"ಕಳೆದ ಕೆಲವು ದಿನಗಳಿಂದ ಅವಳು ಕೆಲವೇ ಸಮಯ ಎಚ್ಚರವಾಗಿರುತ್ತಿದ್ದಳು ಮತ್ತು ಆಹಾರ ಮತ್ತು ದ್ರವ ವಸ್ತುಗಳ ಸೇವನೆಗೆ ಆಸಕ್ತಿಯನ್ನೇ ತೋರುತ್ತಿಲ್ಲ. ಅವಳ ಸ್ಥಿತಿ ಭಾನುವಾರ ಬೆಳಗ್ಗೆ ಹದಗೆಟ್ಟಿತ್ತು ಮತ್ತು ಜಿಯಾ ಜಿಯಾಳಿಗೆ ನಡೆಯಲು ಆಗುತ್ತಿರಲಿಲ್ಲ" ಎಂದು ಕೂಡ ಹೇಳಿಕೆ ತಿಳಿಸಿದೆ. 
'ಒಳ್ಳೆಯ" ಎಂಬ ಅರ್ಥವುಳ್ಳ ಜಿಯಾ ಜಿಯಾಳನ್ನು ಚೈನಾ ಸರ್ಕಾರ ಹಾಂಕಾಂಗ್ ಗೆ 1999 ರಲ್ಲಿ ಉಡುಗೊರೆ ನೀಡಿತ್ತು. ಪಾಂಡಾಗಳ ಸರಾಸರಿ ಆಯಸ್ಸು 20 ವರ್ಷಗಳಾಗಿದ್ದು, ಈ ನಿಟ್ಟಿನಲ್ಲಿ ಜಿಯಾ ಜಿಯಾ ಬದುಕು ವಿಶೇಷವಾಗಿತ್ತು. 
ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಸಂಸ್ಥೆ ಹೇಳುವಂತೆ ದೈತ್ಯ ಪಾಂಡಾಗಳ ಬದುಕುವ ಪರಿಸರ ನಾಶವಾಗಿರುವುದರಿಂದ ಅವುಗಳ ಸಂಖ್ಯೆ 2000 ಕ್ಕೂ ಕೆಳಗೆ ಕುಸಿದಿದೆ ಎನ್ನುತ್ತದೆ. 
ಜಿಯಾ ಜಿಯಾ ಐದು ಬಾರಿ ಹಡೆದು ಆರು ಮಕ್ಕಳಿಗೆ ಜನ್ಮ ನೀಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com