ರಾಜಕೀಯ ಉದ್ದೇಶದಿಂದ ಅಯೋಧ್ಯೆಗೆ ಭೇಟಿ ನೀಡಿಲ್ಲ: ಮಹೇಶ್ ಶರ್ಮಾ

ತಮ್ಮ ಅಯೋಧ್ಯೆ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಿಸುವ ವಿಚಾರಕ್ಕೂ ಯಾವುದೇ ಸಂಬಂಧವೂ ಇಲ್ಲ, ಯಾತ್ರಿಕರನ್ನು ...
ಮಹೇಶ್ ಶರ್ಮಾ
ಮಹೇಶ್ ಶರ್ಮಾ

ನವದೆಹಲಿ: ತಮ್ಮ ಅಯೋಧ್ಯೆ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಿಸುವ ವಿಚಾರಕ್ಕೂ ಯಾವುದೇ ಸಂಬಂಧವೂ ಇಲ್ಲ, ಯಾತ್ರಿಕರನ್ನು ಆಕರ್ಷಿಸುವ ಸಲುವಾಗಿ ಉತ್ತಮ ಪ್ರವಾಸೀ ಸ್ಥಳವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಷ್ಟೇ ತಾವು ಈ ಭೇಟಿ ನೀಡುತ್ತಿರುವುದಾಗಿ ಮಹೇಶ್ ಶರ್ಮಾ ಹೇಳಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಿದ ಉದ್ದೇಶವನ್ನು ಮಹೇಶ್ ಶರ್ಮಾ ಸ್ಪಷ್ಟಪಡಿಸಿದರು. ಪ್ರವಾಸೋದ್ಯಮ ಸಚಿವನಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಮ್ಯೂಸಿಯಂ ಸ್ಥಳ ಪರಿಶೀಲನೆಗೆ ಆಗಮಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

1992ರಲ್ಲಿ ಕರಸೇವಕರು 16ನೇ ಶತಮಾನದ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವನ್ನು ಕೆಡವಿ ಹಾಕಿದ್ದರು. ಈ ಜಾಗದಲ್ಲೇ ರಾಮ ಜನಿಸಿದ್ದರಿಂದ ಇಲ್ಲಿಯೇ ರಾಮಮಂದಿರ ನಿರ್ಮಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ಪ್ರತಿಪಾದಿಸುತ್ತಾ ಬಂದಿವೆ. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com