ಜೆ ಎನ್ ಯು ಎಬಿವಿಪಿ ಸದಸ್ಯರು ನಜೀಬ್ ನನ್ನು ಕೊಲ್ಲಬೇಕು ಎಂದಿದ್ದರು: ಪ್ರತ್ಯಕ್ಷದರ್ಶಿ

ಅಕ್ಟೋಬರ್ 14 ರ ರಾತ್ರಿ ಸುಮಾರು 30 ಎಬಿವಿಪಿ ಸದಸ್ಯ ವಿದ್ಯಾರ್ಥಿಗಳ ಗುಂಪು ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹಮದ್ ವಿರುದ್ಧ ಏಟು, ಬೈಗುಳ ಮತ್ತು ಜನಾಂಗೀಯ ನಿಂದನೆಯ ಸುಳಿಮಳೆಗೈದಿದ್ದರು ಮತ್ತು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅಕ್ಟೋಬರ್ 14 ರ ರಾತ್ರಿ ಸುಮಾರು 30 ಎಬಿವಿಪಿ ಸದಸ್ಯ ವಿದ್ಯಾರ್ಥಿಗಳ ಗುಂಪು ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹಮದ್ ವಿರುದ್ಧ ಏಟು, ಬೈಗುಳ ಮತ್ತು ಜನಾಂಗೀಯ ನಿಂದನೆಯ ಸುಳಿಮಳೆಗೈದಿದ್ದರು ಮತ್ತು "ಅವನನ್ನು 72 ಕನ್ಯೆಯರ ಬಳಿ ಕಳುಹಿಸಬೇಕು" ಎಂದು ಕೊಲ್ಲುವ ಮಾತನಾಡಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 
ಅಹಮದ್ ಬಗ್ಗೆ ಯಾವುದೇ ಸುಳಿವು ಸಿಗದೆ ಮತ್ತೊಂದು ದಿನ ಕಳೆದಿದ್ದು, ಈಗ ಮತ್ತೊಬ್ಬ ಪ್ರತ್ಯಕ್ಷದರ್ಶಿ ತಾವು ಕಂಡದ್ದನ್ನು ಹೇಳಿಕೊಂಡಿದ್ದಾರೆ. 
ಜವಾಹರ್ ನೆಹರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಶಿಕ್ಷಣದ ಶಾಲೆಯ ಎಂಫಿಲ್ ವಿದ್ಯಾರ್ಥಿ ಶಾಹಿದ್ ರಾಜಾ ಖಾನ್ ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 
"ನನಗೆ ಹೊರಗಿನಿಂದ ಏನೋ ಶಬ್ದ ಕೇಳಿಸಿತು" ಎನ್ನುವ ಅವರು ಮೊದಲನೇ ಮಹಡಿಗೆ ತೆರಳಿದೆ ಎನ್ನುತ್ತಾರೆ. ಆಗ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ಸದಸ್ಯ ವಿಕ್ರಾಂತ್ ಕುಮಾರ್ ನನ್ನ ಬಳಿ ಬಂದು ನಜೀಬ್ ನಿಂದ ರಕ್ಷಿಸುವಂತೆ ಕೋರಿದನು. "ಆದರೆ ಅಲ್ಲಿ ಕಂಡದ್ದೇ ಬೇರೆ ಇತ್ತು. ನಜೀಬ್ ಮುಖ, ಬಾಯಿ ಮತ್ತು ಮೂಗಿನಿಂದ ರಕ್ತ ಸೋರುತ್ತಿತ್ತು. ನಾವು ವಾರ್ಡನ್ ಅವರನ್ನು ಕರೆದು ರಕ್ತ ತೊಳೆಯಲು ಶೌಚಾಲಯಕ್ಕೆ ಕರೆದುಕೊಂಡು ಹೋದೆವು. ಆದರೆ ಸ್ವಲ್ಪವೇ ಸಮಯದಲ್ಲಿ 25-30 ಜನ ವಿದ್ಯಾರ್ಥಿಗಳು ಎಲ್ಲಿಂದಲೋ ಬಂದು ನಜೀಬ್ ಗೆ ಮನಬಂದಂತೆ ಥಳಿಸಿದರು" ಎಂದು ತಿಳಿಸುತ್ತಾರೆ. 
ವಾರ್ಡನ್ ಕಚೇರಿಗೆ ತೆರಳುವವರೆಗೂ ನಿರಂತರವಾಗಿ ಅಹಮದ್ ಗೆ ಎಬಿವಿಪಿ ವಿದ್ಯಾರ್ಥಿಗಳು ಹೊಡೆಯುತ್ತಲೇ ಇದ್ದರು. ಅಲ್ಲದೆ ಅವನಿಗೆ ಮನಬಂದಂತೆ ಬೈಯ್ಯುತ್ತಿದ್ದರು ಎಂದು ಕೂಡ ಅವರು ತಿಳಿಸುತ್ತಾರೆ. 
"ವಾರ್ಡನ್ ಇನ್ನಷ್ಟು ಶಿಸ್ತಿನಿಂದ ಮತ್ತು ಪಕ್ಷಪಾತವಿಲ್ಲದೆ ನಡೆದುಕೊಳ್ಳಬೇಕಿತ್ತು. ಆದರೆ ಅವರ ಕಚೇರಿಯ ಒಳಗು ನಜೀಬ್ ವಿರುದ್ಧ ನಿರಂತರವಾಗಿ ಬೈಗುಳ ಸುರಿಸಲಾಯಿತು. ಅವನನ್ನು 72 ಕನ್ಯೆಯರ ಬಳಿ ಕಳುಹಿಸಬೇಕು ಎಂದು ಹೇಳುತ್ತಿದ್ದರು. ಅದರರ್ಥ ನಿಮಗೆ ಗೊತ್ತಿದೆ" ಎಂದು ಕೂಡ ಶಾಹಿದ್ ಹೇಳಿದ್ದಾರೆ. 
ನಜೀಬ್ ಪತ್ತೆ ಹಚ್ಚಲು ವಿಶೇಷ ತನಿಖಾ ದಳವನ್ನು ರಚಿಸಲಾಗಿದ್ದರು ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com