ಪತಿಯ ಅಕ್ರಮ ಸಂಬಂಧವನ್ನು ಪತ್ನಿಗೆ ಬಯಲು ಮಾಡಿದ ಸಾಕು ಗಿಣಿ

'ನಾನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತೆಲ್ಲೋ' ಎಂದು ವ್ಯಕ್ತಿಯೊಬ್ಬ ಹಾಡಿಕೊಳ್ಳಬೇಕಾದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ದುಬೈ: 'ನಾನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತೆಲ್ಲೋ' ಎಂದು ವ್ಯಕ್ತಿಯೊಬ್ಬ ಹಾಡಿಕೊಳ್ಳಬೇಕಾದ ಘಟನೆ ನಡೆದಿದೆ. 
ಪುರುಷನೊಬ್ಬ ಮನೆಕೆಲಸದಾಕೆಯ ಜೊತೆಗೆ ನಡೆಸುತ್ತಿದ್ದ ಗುಟ್ಟಿನ ಮಾತುಕತೆಯನ್ನು ಅವನ ಪತ್ನಿಯ ಮುಂದೆ ಅವರು ಸಾಕಿದ್ದ ಗಿಣಿ ಉಲಿಯುವ ಮೂಲಕ ಅವನ ಅಕ್ರಮ ಸಂಬಂಧವನ್ನು ಬಯಲಿಗೆಳೆದಿದ್ದರಿಂದ ಕುವೈತ್ ನಲ್ಲಿ ಬಹುತೇಕ ಜೈಲುಪಾಲಾಗುವ ಸಂದರ್ಭ ಒದಗಿ ಬಂದಿತ್ತಂತೆ!
ಗಿಣಿ ತನ್ನ ಮಾಲೀಕ ಮತ್ತು ಮನೆಕೆಲಸದಾಕೆಯ ನಡುವಿನ ಪ್ರೀತಿಯ ಮಾತುಕತೆಯನ್ನು ಉಲಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅರಬ್ ಟೈಮ್ಸ್ ವರದಿ ಮಾಡಿದೆ. 
ತದನಂತರ ತನ್ನ ಪತಿಯ ಮೇಲೆ ಮೊದಲೇ ಅನುಮಾನವಿತ್ತು ಎಂದು ದೂರಿ ಪತ್ನಿ ಹವಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಕೂಡ ವರದಿಯಾಗಿದೆ. 
ಆದರೆ ಗಟ್ಟಿ ಸಾಕ್ಷ್ಯಾಧಾರಗಳು ಇಲ್ಲದೆ ಇರುವುದರಿಂದ ಇದನ್ನು ಕೋರ್ಟ್ ನಲ್ಲಿ ಪರಿಗಣಿಸುವುದಿಲ್ಲ ಎಂದು ಪ್ರಾಸೆಕ್ಯೂಶನ್ ಅಧಿಕಾರಿ ಹೇಳಿದ್ದು, ಗಿಣಿ ಟಿವಿ ಅಥವಾ ರೇಡಿಯೋದಲ್ಲಿ ಈ ಮಾತುಗಳನ್ನು ಕೇಳಿಲ್ಲ ಎಂಬುದನ್ನು ಧೃಢೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ. 
ಗಲ್ಫ್ ದೇಶಗಳಲ್ಲಿ ಅಕ್ರಮ ಸಂಬಂಧ ಕಾನೂನು ಬಾಹಿರ ಮತ್ತು ಅದಕ್ಕೆ ಜೈಲು ಶಿಕ್ಷೆ ಕೂಡ ವಿಧಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com