ಐ ಐ ಎಸ್ ಸಿ ಬೆಂಗಳೂರು ಭಾರತದ ನಂ1 ವಿಶ್ವವಿದ್ಯಾಲಯ; ಜಾಗತಿಕ ರ್ಯಾಂಕಿಂಗ್ ಕುಸಿತ
ದೇಶದ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಬೆಂಗಳೂರು ಸ್ಥಾನ ಕಾಯ್ದುಕೊಂಡಿದ್ದರು, ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಐದು ಸ್ಥಾನಗಳಷ್ಟು ಹಿಂದಕ್ಕೆ ಹೋಗಿದೆ.
ಲಂಡನ್: ದೇಶದ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಬೆಂಗಳೂರು ಸ್ಥಾನ ಕಾಯ್ದುಕೊಂಡಿದ್ದರು, ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಐದು ಸ್ಥಾನಗಳಷ್ಟು ಹಿಂದಕ್ಕೆ ಹೋಗಿದೆ.
ಜೆಮ್ ಶೆಡ್ ಜಿ ಟಾಟಾ, ಮೈಸೂರು ಮಹಾರಾಜ ಮತ್ತು ಭಾರತೀಯ ಸರ್ಕಾರದ ಜಂಟಿ ಸಹಯೋಗದೊಂದಿದೆ 1909 ರಲ್ಲಿ ನಿರ್ಮಾಣವಾದ ಐ ಐ ಎಸ್ ಸಿ ಜಾಗತಿಕ ರ್ಯಾಂಕಿಂಗ್ ಪತಿಯಲ್ಲಿ ಕಳೆದ ವರ್ಷ 147 ನೇ ಸ್ಥಾನದಲ್ಲಿದ್ದರೆ ಈ ವರ್ಷ 152 ನೇ ಸ್ಥಾನಕ್ಕೆ ಕುಸಿದಿದೆ.
400 ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿರುವ ಇತರ ಸಂಸ್ಥಗಳೆಂದರೆ ಐಐಟಿ ದೆಹಲಿ (185), ಐಐಟಿ ಬಾಂಬೆ (219), ಐಐಟಿ ಮದ್ರಾಸ್ (249), ಐಐಟಿ ಕಾನ್ಪುರ್ (302), ಐಐಟಿ ಖರಗ್ಪುರ್ (313) ಮತ್ತು ಐಐಟಿ ರೂರ್ಕೆ (399).
"ಈ ವರ್ಷದ ರ್ಯಾಂಕಿಂಗ್ ಪಟ್ಟಿ ಸೂಚಿಸುವುದೇನೆಂದರೆ, ವಿಶ್ವವಿದ್ಯಾಲಯಗಳಲ್ಲಿ ಹೂಡಿಕೆ ಯಾವ ವಿಶ್ವವಿದ್ಯಾಲಯ ಮೇಲೇರುತ್ತದೆ ಅಥವಾ ಕುಸಿಯುತ್ತದೆ" ಎಂದು ತಿಳಿಸುತ್ತದೆ ಎಂದು ಈ ಸಮೀಕ್ಷೆಯ ಉಸ್ತುವಾರಿ ಬೆನ್ ಸೊವ್ಟರ್ ಹೇಳಿದ್ದಾರೆ.
ವಿಶ್ವ ರ್ಯಾಂಕಿಂಗ್ ಪಟ್ಟಿಯ ಮೊದಲ ಹತ್ತು ಸ್ಥಾನಗಳು ಹೀಗಿವೆ.