ಭಯೋತ್ಪಾದನೆಯ ರಫ್ತು ಎಲ್ಲರಿಗು ಸಮಾನವಾದ ಬೆದರಿಕೆ: ಏಶಿಯಾನ್ ಸಮಾವೇಶದಲ್ಲಿ ಮೋದಿ

ಪಾಕಿಸ್ತಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಈ ಪ್ರದೇಶದ ಭೂಭಾಗಕ್ಕೆ "ಭಯೋತ್ಪಾದನೆಯ ರಫ್ತು" ಸಮಾನವಾದ ಬೆದರಿಕೆ ಎಂದಿದ್ದಾರೆ.
ಭಾರತ-ಏಶಿಯಾನ್ ಸಮಾವೇಶದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಭಾರತ-ಏಶಿಯಾನ್ ಸಮಾವೇಶದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ
ವಿಎಂಟೈನ್: ಪಾಕಿಸ್ತಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಈ ಪ್ರದೇಶದ ಭೂಭಾಗಕ್ಕೆ "ಭಯೋತ್ಪಾದನೆಯ ರಫ್ತು" ಸಮಾನವಾದ ಬೆದರಿಕೆ ಎಂದಿದ್ದಾರೆ. 
"ಭಯೋತ್ಪಾದನೆಯ ರಫ್ತು, ಬೆಳೆಯುತ್ತಿರುವ ತೀವ್ರವಾದ ಮತ್ತು ತೀವ್ರ ಹಿಂಸೆ ಹರಡುತ್ತಿರುವುದು ನಮ್ಮ ಸಮಾಜಗಳಿಗೆ ಸಮಾನವಾದ ಭದ್ರತಾ ಅಪಾಯಗಳಾಗಿವೆ" ಎಂದು 14 ನೇ ಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳ ಸಂಘ (ಏಶಿಯಾನ್) ಸಮಾವೇಶದಲ್ಲಿ ಭಾಷಣ ಮಾಡುವಾಗ ಹೇಳಿದ್ದಾರೆ. 
ಭಾರತ ಪೂರ್ವ ನೀತಿಗೆ ಏಶಿಯಾನ್ ಕೇಂದ್ರವಾಗಿದ್ದು, ದಕ್ಷಿಣ ಪೂರ್ವ ಏಷಿಯಾದ ಜೊತೆಗಿನ ಭಾರತದ ಸಂಬಂಧ "ಸೌಹಾರ್ದತೆಯ ಮೂಲ" ಎಂದು ಮೋದಿ ಬಣ್ಣಿಸಿದ್ದಾರೆ. 
ಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾ ದೇಶಗಳ ಸಂಘ (ಏಶಿಯಾನ್) ಸಮಾವೇಶದ ನಂತರ 11 ನೇ ಪೂರ್ವ ಏಷಿಯಾ ಸಮಾವೇಶ ಗುರುವಾರ ಜರುಗಲಿದೆ. 
ಇದಕ್ಕೂ ಮುಂಚಿತವಾಗಿ ಅತಿಥಿ ರಾಷ್ಟ್ರ ಲಾವೋಸ್ ನ ಪ್ರಧಾನಿ ತೊಂಗಲೌನ್ ಸಿಸೌಲಿಥ್ ಜೊತೆಗೆ ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. 
ಸಮಾವೇಶಗಳ ನಂತರ ಮೋದಿ ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಜಿಯುನ್ ಹೇ, ಮಯ್ನಮಾರ್ ನ ಸ್ಟೇಟ್ ಕೌನ್ಸಲರ್ ಮತ್ತು ವಿದೇಶಾಂಗ ಸಚಿವೆ ಆಂಗ್ ಸ್ಯಾನ್ ಸು ಕಿ ಮತ್ತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com