ಉತ್ತರಪ್ರದೇಶದ ಮೊದಲ ಕುಟುಂಬಕ್ಕೆ ಗುರುವಾರ ಸಂಭ್ರವಾಗಿ ಪರಿಣಮಿಸಿದೆ. ಕುಟುಂಬ ಸದಸ್ಯ ಮೈನ್ಪುರಿ ಸಂಸದ ತೇಜ್ ಪ್ರತಾಪ್ ಸಿಂಗ್ ಯಾದವ್ ಅವರಿಗೆ ಗಂಡು ಮಗು ಹುಟ್ಟಿರುವುದೇ ಈ ಸಂತಸಕ್ಕೆ ಕಾರಣ.
ಲಾಲು ಪ್ರಸಾದ್ ಯಾದವ್-ಮುಲಾಯಂ ಸಿಂಗ್ ಯಾದವ್ (ಸಂಗ್ರಹ ಚಿತ್ರ)
ಲಖನೌ: ಉತ್ತರಪ್ರದೇಶದ ಮೊದಲ ಕುಟುಂಬಕ್ಕೆ ಗುರುವಾರ ಸಂಭ್ರವಾಗಿ ಪರಿಣಮಿಸಿದೆ. ಕುಟುಂಬ ಸದಸ್ಯ ಮೈನ್ಪುರಿ ಸಂಸದ ತೇಜ್ ಪ್ರತಾಪ್ ಸಿಂಗ್ ಯಾದವ್ ಅವರಿಗೆ ಗಂಡು ಮಗು ಹುಟ್ಟಿರುವುದೇ ಈ ಸಂತಸಕ್ಕೆ ಕಾರಣ.
ಈ ಹಸುಗೂಸಿನ ಆಗಮನದಿಂದ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮುತ್ತಾತರಾಗಿದ್ದರೆ ಎಂದು ಮೂಲಗಳು ತಿಳಿಸಿವೆ.
ತೇಜ್ ಪ್ರತಾಪ್ ಸಿಂಗ್ ಯಾದವ್ ಮುಲಾಯಂ ಸಿಂಗ್ ಯಾದವ್ ಅವರ ಸಹೋದರನ ಮೊಮ್ಮಗ. ಹಾಗೆಯೇ ರಾಜ್ ಪ್ರತಾಪ್ ಸಿಂಗ್ ಅವರು 2015 ರಲ್ಲಿ ರಾಷ್ಟ್ರೀಯ ಜನತಾ ದಳದ ಸುಪ್ರಿಮೋ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರಾಜ್ ಲಕ್ಷ್ಮಿ ಅವರನ್ನು ವರಿಸಿದ್ದರು. ಈ ಮೂಲಕ ಲಾಲು ಅವರು ತಾತ ಕೂಡ ಆಗಿರುವದು ವಿಶೇಷ.
ಬುಧವಾರ ಸಂಜೆ ದೆಹಲಿ ಆಸ್ಪತ್ರೆಯಲ್ಲಿ ಮಗು ಜನಿಸಿದೆ.
ಲಾಲು ಯಾದವ್ ಅವರಿಗೆ ಈ ಸಂತಸದ ಜೊತೆಗೆ, ಇದೇ ದಿನ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಕೂಡ ಗಂಡು ಮಗುವಿಗೆ ಜನ್ಮ ನೀಡಿದ್ದು, ಒಂದೇ ದಿನ ಎರಡು ಮಕ್ಕಳಿಗೆ ತಾತ ಆದ ಸಂತಸ ಅವರದ್ದು.
ಬಿಹಾರದಿಂದ ಮೀಸಾ ಭಾರತಿ ರಾಜ್ಯಸಭಾ ಸದಸ್ಯರಾಗಿದ್ದು, ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.