ಸಿಕ್ಕಿಂ ಅತಿ ಸ್ವಚ್ಛ - ಜಾರ್ಖಂಡ್ ಅತಿ ಕೊಳಕು, ಕರ್ನಾಟಕ ಕೂಡ ಪಟ್ಟಿಯ ಕೊನೆಗೆ: ಸಮೀಕ್ಷೆ

ಗ್ರಾಮ ಸ್ವಚ್ಛತೆಯಲ್ಲಿ ಭಾರತದಲ್ಲಿ ಸಿಕ್ಕಿಂ ಅತಿ ಹೆಚ್ಚು ಸ್ವಚ್ಛ ರಾಜ್ಯವಾಗಿದ್ದರೆ, ಜಾರ್ಖಂಡ್ ಕೊನೆಯ ಸ್ಥಾನದಲ್ಲಿದೆ ಎಂದಿದೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ಸಮೀಕ್ಷೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗ್ರಾಮ ಸ್ವಚ್ಛತೆಯಲ್ಲಿ ಭಾರತದಲ್ಲಿ ಸಿಕ್ಕಿಂ ಅತಿ ಹೆಚ್ಚು ಸ್ವಚ್ಛ ರಾಜ್ಯವಾಗಿದ್ದರೆ, ಜಾರ್ಖಂಡ್ ಕೊನೆಯ ಸ್ಥಾನದಲ್ಲಿದೆ ಎಂದಿದೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ಸಮೀಕ್ಷೆ. 
ಸಮೀಕ್ಷೆಯ ಈ ಅಧ್ಯಯನವನ್ನು ಕೇಂದ್ರ ಗ್ರಾಮಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಗುರುವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. 
ಸಿಕ್ಕಿಂ ನಂತರ ಸ್ವಚ್ಛತೆಯಲ್ಲಿ ಮೊದಲ ಹತ್ತು ಸ್ಥಾನಗಳು ಕ್ರಮವಾಗಿ ಈ ರಾಜ್ಯಗಳಿಗೆ ದೊರೆತಿವೆ. ಕೇರಳ, ಮಿಜೋರಾಂ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಹರ್ಯಾಣ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಮೇಘಾಲಯ. 
ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಗುಜರಾತ್ ಮಧ್ಯಸ್ಥಾನದಲ್ಲಿ ಅಂದರೆ 14 ನೇ ಸ್ಥಾನದಲಿದ್ದರೆ, ಕೊನೆಯ ಸ್ಥಾನಗಳಲ್ಲಿ ಛತ್ತೀಸ್ ಘರ್, ಒರಿಸ್ಸಾ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ತಮಿಳು ನಾಡು, ಕರ್ನಾಟಕ, ಜಮ್ಮು ಕಾಶ್ಮೀರ ಮತ್ತು ಜಾರ್ಖಂಡ ಇವೆ. 
ಮೇ ನಿಂದ ಜೂನ್ 2015 ರ ನಡುವೆ ದೇಶದಾದ್ಯಂತ 3778 ಗ್ರಾಮಗಳಲ್ಲಿನ 73176 ಗ್ರಾಮ ಕುಟುಂಬಗಳನ್ನು ಈ ಸಮೀಕ್ಷೆಯಲ್ಲಿ ಎನ್ ಎಸ್ ಎಸ್ ಒ ಪರಿಗಣಿಸಿದೆ. ಮನೆಗಳಲ್ಲಿ ಶೌಚಾಲಯ, ಅಥವಾ ಸಮುದಾಯದ ಶೌಚಾಲಯಗಳು ಇರುವಿಕೆಯನ್ನು ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ಪರಿಗಣಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com