ಚುನಾವಣೆ ಸನಿಹದಲ್ಲಿರುವಾಗ ಕುಟುಂಬ ಸದಸ್ಯರು ಒಟ್ಟಾಗಿರಬೇಕು: ಎಸ್ ಪಿ ಮುಖಂಡ

ಮುಂದಿನ ವರ್ಷದ ವಿಧಾನಸಭಾ ಚುನಾವಣಾ ಸನಿಹದಲ್ಲಿದ್ದು, ಉತ್ತರ ಪ್ರದೇಶದ ಆಡಳಿತ ಸಮಾಜವಾದಿ ಪಕ್ಷ ಒಗ್ಗಟ್ಟಾಗಿ ಇರಬೇಕಾದ ಅವಶ್ಯಕತೆ ಇದು ಎಂದು ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್
ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್
ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್
ಲಖನೌ: ಮುಂದಿನ ವರ್ಷದ ವಿಧಾನಸಭಾ ಚುನಾವಣಾ ಸನಿಹದಲ್ಲಿದ್ದು, ಉತ್ತರ ಪ್ರದೇಶದ ಆಡಳಿತ ಸಮಾಜವಾದಿ ಪಕ್ಷ ಒಗ್ಗಟ್ಟಾಗಿ ಇರಬೇಕಾದ ಅವಶ್ಯಕತೆ ಇದು ಎಂದು ಪಕ್ಷದ ಮುಖಂಡ ಶಿವಪಾಲ್ ಸಿಂಗ್ ಯಾದವ್ ಗುರುವಾರ ಹೇಳಿದ್ದಾರೆ. 
"ಚುನಾವಣೆ ಸನಿಹದಲ್ಲಿದೆ. ಕುಟುಂಬ ಮತ್ತು ಉಳಿದವರೆಲ್ಲರೂ ಒಗ್ಗಟ್ಟಿನಿಂದಿರುವ ಸಮಯ ಇದು" ಎಂದು ಸಮಾಜವಾದಿ ಪಕ್ಷದಲ್ಲಿ ಬಿರುಕು ಬಿಟ್ಟಿದೆ ಎಂವ ಸುದ್ದಿಗಳ ನಡುವೆ ನವದೆಹಲಿಗೆ ಬಂದ ಶಿವಪಾಲ್ ಹೇಳಿದ್ದಾರೆ. 
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಗುರಿ ಬಹುಮತವನ್ನು ಮುಟ್ಟುವುದು ಎಂದಿರುವ ಅವರು, ಪಕ್ಷದ ವ್ಯವಹಾರಗಳಲ್ಲಿ ಸರ್ವಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರದ್ದೇ ಕೊನೆಯ ಮಾತು ಎಂದಿದ್ದಾರೆ. 
ಇತ್ತೀಚೆಗಷ್ಟೇ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಖಿಲೇಶ್ ಯಾದವ್ ಅವರನ್ನು ಬದಲಿಸಿದ್ದ ಶಿವಪಾಲ್ ಯಾದವ್ ಅವರಿಂದ ಖಾತೆಗಳನ್ನು ಮುಖ್ಯಮಂತ್ರಿ ಅಖಿಲೇಶ್ ಕಸಿದುಕೊಂಡ ಎರಡು ದಿನಗಳ ನಂತರ ಶಿವಪಾಲ್ ಮಾತನಾಡಿದ್ದಾರೆ. 
"ನೇತಾಜಿ (ಮುಲಾಯಂ ಸಿಂಗ್) ನಿರ್ಧಾರವನ್ನು ಪಕ್ಷದಲ್ಲಿ ಎಲ್ಲರು ಒಪ್ಪಿಕೊಳ್ಳಬೇಕಿರುತ್ತದೆ. ಯಾರು ಅವರ ನಿರ್ಧಾರಕ್ಕೆ ಸವಾಲೆಸೆಯುವಂತಿಲ್ಲ" ಎಂದು ಅವರು ಹೇಳಿದ್ದಾರೆ. 
"ನೇತಾಜಿ ಅವರನ್ನು (ಅಖಿಲೇಶ್ ಯಾದವ್) ಮುಖ್ಯಮಂತ್ರಿಯಾಗಿ ನೇಮಿಸಿದರು ಮತ್ತು ನಾನದನ್ನು ಒಪ್ಪಿಕೊಂಡಿದ್ದೇನೆ" ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com