ಮತ್ತೆ ಕಳಚಿತು ಪಾಕಿಸ್ತಾನದ ಮುಖವಾಡ: ಬಲೂಚಿಸ್ತಾನದಲ್ಲಿ 6 ವರ್ಷಗಳಲ್ಲಿ 1 ಸಾವಿರ ಮೃತ ದೇಹಗಳು ಪತ್ತೆ!

ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಭಾರತ ಧ್ವನಿ ಎತ್ತಿದ ನಂತರ, ಆ ಭಾಗದಲ್ಲಿ ನಡೆದಿರುವ ಮಾನವ ಹಕ್ಕು ಉಲ್ಲಂಘನೆ, ದೌರ್ಜನ್ಯಗಳಿಗೆ ಸಂಬಂಧಿಸಿದ ಮತ್ತಷ್ಟು ಪ್ರಕರಣಗಳು ಬಹಿರಂಗವಾಗಿವೆ.
ಮತ್ತೆ ಕಳಚಿತು ಪಾಕಿಸ್ತಾನದ ಮುಖವಾಡ: ಬಲೂಚಿಸ್ತಾನದಲ್ಲಿ 6 ವರ್ಷಗಳಲ್ಲಿ 1 ಸಾವಿರ ಮೃತ ದೇಹಗಳು ಪತ್ತೆ!
ಮತ್ತೆ ಕಳಚಿತು ಪಾಕಿಸ್ತಾನದ ಮುಖವಾಡ: ಬಲೂಚಿಸ್ತಾನದಲ್ಲಿ 6 ವರ್ಷಗಳಲ್ಲಿ 1 ಸಾವಿರ ಮೃತ ದೇಹಗಳು ಪತ್ತೆ!

ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಭಾರತ ಧ್ವನಿ ಎತ್ತಿದ ನಂತರ, ಆ ಭಾಗದಲ್ಲಿ ನಡೆದಿರುವ ಮಾನವ ಹಕ್ಕು ಉಲ್ಲಂಘನೆ, ದೌರ್ಜನ್ಯಗಳಿಗೆ ಸಂಬಂಧಿಸಿದ ಮತ್ತಷ್ಟು ಪ್ರಕರಣಗಳು ಬಹಿರಂಗವಾಗಿವೆ.

ಪಾಕಿಸ್ತಾನದ ಪತ್ರಿಕೆಯೊಂದು ಪ್ರಕಟಿಸಿರುವ ವರದಿ ಪಾಕಿಸ್ತಾನದ ಕರಾಳ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದೆ. ಪಾಕ್ ಪತ್ರಿಕೆಯೊಂದರ ವರದಿಯ ಪ್ರಕಾರ ಬಲೂಚಿಸ್ತಾನವೊಂದರಲ್ಲೇ ಕಳೆದ 6 ವರ್ಷಗಳಲ್ಲಿ ಗುಂಡು ಹೊಕ್ಕಿದ 1,000 ಮೃತ ದೇಹಗಳು ಸಿಕ್ಕಿವೆ.

ದಿ ನ್ಯೂಸ್ ಎಂಬ ಪತ್ರಿಕೆಯ ವರದಿಯ ಪ್ರಕಾರ ಅಂಗಾಗಳನ್ನು ಕತ್ತರಿಸಿರುವ ಸ್ಥಿತಿಯಲ್ಲಿದ್ದ ಮೃತ ದೇಹಗಳ ಪೈಕಿ ಶೇ.51 ರಷ್ಟು ಬಲೂಚ್ ಗಳದ್ದಾಗಿದೆ. ಇನ್ನು ಶೇ.22 ರಷ್ಟು ಮೃತದೇಹಗಳು ಪಷ್ಟುನ್ ರದ್ದಾಗಿದ್ದು ಉಳಿದ ಮೃತದೇಹಗಳು ಪಂಜಾಬಿಗಳು, ಅಫ್ಘನ್ ನಿರಾಶ್ರಿತರದ್ದು ಹಾಗೂ ಇತರ ಮುಸ್ಲಿಮೇತರರದ್ದಾಗಿದೆ.

ನ್ಯಾಷನಲ್ ಆಕ್ಷನ್ ಪ್ಲಾನ್ ನ ಹಿರಿಯ ಅಧಿಕಾರಿಗಳು ಸಿದ್ಧಪಡಿಸಿರುವ ಅಂಕಿ-ಅಂಶಗಳ ಪ್ರಕಾರ 1,000 ಮೃತದೇಹಗಳ ಪೈಕಿ 940 ಮೃತದೇಹಗಳು ಬಲೂಚಿಸ್ತಾನ ಪ್ರಾಂತ್ಯದ ಹಲವು ಜಿಲ್ಲೆಗಳಲ್ಲಿ ಸಿಕ್ಕಿದ್ದು 2010 ರಿಂದ ಅತಿ ಹೆಚ್ಚು ಮೃತ ದೇಹಗಳು  ಅಂದರೆ 346 ಮೃತದೇಹಗಳು ಬಲೂಚಿಸ್ತಾನದ ಕ್ವೆಟ್ಟಾ ಒಂದರಲ್ಲೇ ಪತ್ತೆಯಾಗಿವೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ 1,000 ಮೃತದೇಗಳು ಪತ್ತೆಯೆಯಾಗಿರುವುದರ ಜೊತೆಗೆ 112 ಜನರು ನಾಪತ್ತೆಯಾಗಿದ್ದಾರೆ. 2011 ರ ಬಳಿಕ ಬಲೂಚಿಸ್ತಾನದಲ್ಲಿ ವಿವಾದ ಅಥವಾ ಉದ್ದೇಶಪೂರ್ವಕವಾಗಿ 1,837 ಜನರನ್ನು ಹತ್ಯೆ ಮಾಡಲಾಗಿದ್ದು ಇದರಲ್ಲಿ ಹಲವು ಮೃತದೇಹಗಳ ಗುರುತು ಸಿಗದಂತೆ ಮುಖವನ್ನು ಸುಟ್ಟು ಹಾಕಲಾಗಿದೆ ಎಂದು ದಿ ನ್ಯೂಸ್ ವರದಿ ಮಾಡಿದೆ.           
ಕಳೆದ 6 ವರ್ಷಗಳ ಅವಧಿಯಲ್ಲಿ ಭಯೋತ್ಪಾದಕರ ದಾಳಿಯಿಂದ 3,470 ಜನರು ಗಾಯಗೊಂಡಿದ್ದಾರೆ.  2010 ರಲ್ಲಿ 102 ಮೃತದೇಹಗಳು,  2011 ರಲ್ಲಿ 203 ಮೃತ ದೇಹಗಳು, 2012 ರಲ್ಲಿ 166 ಮೃತದೇಹಗಳು, 2013 ರಲ್ಲಿ 168 ಮೃತದೇಹಗಳು, 2014 ರಲ್ಲಿ 165 ಮೃತ ದೇಹಗಳು, 2015 ರಲ್ಲಿ 129 ಮೃತ ದೇಹಗಳು ಹಾಗೂ ಈ ವರ್ಷ ಗುಂಡು ಹೊಕ್ಕಿರುವ 17 ಶವಗಳನ್ನು ಬಲೂಚಿಸ್ತಾನದ ಪ್ರದೇಶದಲ್ಲಿ ಪತ್ತೆ ಮಾಡಲಾಗಿದೆ.   
ಇನ್ನು ಕೊಲೆಗಳಿಗೆ ಪೂರಕವಾಗಿ ಕಳೆದ 18 ತಿಂಗಳಲ್ಲಿ 13,362 ಕ್ರಿಮಿನಲ್ ಗಳನ್ನು ಬಂಧಿಸಲಾಗಿದ್ದು, 4,154 ಅಕ್ರಮ ಶಸ್ತ್ರಾಸ್ತ್ರ ಹಾಗೂ 248,327 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com