ಸಮಾಜವಾದಿ ಪರಿವಾರ ಒಟ್ಟಾಗಿದೆ: ಅಖಿಲೇಶ್ ಯಾದವ್

ಸಮಾಜವಾದಿ ಪರಿವಾರ ಎಲ್ಲಾ ಸವಾಲುಗಳನ್ನು ಎದುರಿಸಲು ಒಟ್ಟಾಗಿದೆ ಎಂದು ಉತ್ತರ ಪ್ರದೇಶ...
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್(ಸಂಗ್ರಹ ಚಿತ್ರ)
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್(ಸಂಗ್ರಹ ಚಿತ್ರ)
ಲಕ್ನೋ: ಸಮಾಜವಾದಿ ಪರಿವಾರ ಎಲ್ಲಾ ಸವಾಲುಗಳನ್ನು ಎದುರಿಸಲು ಒಟ್ಟಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಹಿಂದೆ ಇದ್ದಂತೆ ಇಂದು ಕೂಡ ಸಮಾಜವಾದಿ ಪಕ್ಷ ಒಟ್ಟಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಸರ್ಕಾರದ ಮುಂದಿರುವ ಸವಾಲುಗಳನ್ನು, ಕೋಮುವಾದಿ ಶಕ್ತಿಗಳ ವಿರುದ್ಧ ಒಟ್ಟಾಗಿ ಹೋರಾಡಲಿದೆ ಎಂದು ಹೇಳಿದರು. ರಾಜ್ಯ ಸಂಪುಟ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಹೀಗೆ ಹೇಳಿದರು.
ಚಿಕ್ಕಪ್ಪ ಶಿವಪಾಲ್ ಜೊತೆ ಕಲಹ, ಭಿನ್ನಾಭಿಪ್ರಾಯ, ಅಖಿಲೇಶ್ ಯಾದವ್ ಗೆ ಆಪ್ತರಾಗಿದ್ದ ಮೂವರು ವಿಧಾನ ಪರಿಷತ್ ಸದಸ್ಯರು ಸೇರಿ ಏಳು ಮಂದಿ ಪಕ್ಷದ ಕಾರ್ಯಕರ್ತರನ್ನು ಪಕ್ಷದಿಂದ ವಜಾಗೊಳಿಸಿದ್ದು ಹೀಗೆ ಕಳೆದೊಂದು ವಾರದಿಂದ ಸಮಾಜವಾದಿ ಪಕ್ಷ ಭಾರೀ ಸುದ್ದಿಯಾಗಿತ್ತು.
ಒಂದೆಂಬಂತೆ ಇದ್ದ ಯಾದವ ಕುಟುಂಬದಲ್ಲಿ ಶಿವಪಾಲ್ ಅಖಿಲೇಶ್ ವಿರುದ್ಧ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯವನ್ನು ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಇನ್ನು ಮುಂದೆ ಸಮಾಜವಾದಿ ಪರಿವಾರ ಒಟ್ಟಾಗಿ ಕೆಲಸ ಮಾಡಲಿದ್ದು ರಾಜ್ಯದಲ್ಲಿ ಮತ್ತೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.
ಯಾದವ ಕುಟುಂಬದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಸುದ್ದಿಗಾರರು ಕೇಳಿದಾಗ, ಪಕ್ಷದೊಳಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com