ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಭಾರತೀಯ ಸೇನೆ ಮತ್ತು ವಾಯುಪಡೆಯ ಮುಖ್ಯಸ್ಥರು ಹಾಗು ನೌಕಾದಳದ ಉಪ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇದು ಎಂದಿನ ಮಾಮೂಲಿ ಮಾತುಕತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಭೆಯಲ್ಲಿ ಸೇನಾಧ್ಯಕ್ಷ ದಲಬೀರ್ ಸಿಂಗ್, ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ ಮತ್ತು ನೌಕಾದಳದ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಭಾಗವಹಿಸಿದ್ದರು. ನೌಕಾಧ್ಯಕ್ಷ ಅಡ್ಮಿರಲ್ ಸುನಿಲ್ ಲಾಂಬಾ ನವದೆಹಲಿಯಲ್ಲಿ ಉಪಸ್ಥಿತರಿರಲಿಲ್ಲ.
ಉರಿ ದಾಳಿಯಲ್ಲಿ 18 ಸೈನಿಕರು ಹತ್ಯೆಯಾದಾಗಿಲಿಂದಲೂ ನವದೆಹಲಿಯಲ್ಲಿ ಹಲವಾರು ಉನ್ನತ ಮಟ್ಟದ ಸಭೆಗಳು ನಡೆದಿವೆ. ಸೇನಾಧ್ಯಕ್ಷ ಇವುಗಳಲ್ಲಿ ಹಲವು ಸಭೆಗಳಲ್ಲಿ ಭಾಗವಹಿಸಿದ್ದರು.
ಉರಿ ದಾಳಿಯ ನಂತರ ಈ ದಾಳಿಯ ಕಾರಣಕರ್ತರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು.