ರಾಜ್ಯ ಪಿ ಎಸ್ ಯು ಸಿಬ್ಬಂದಿಗಳಿಗೆ 476 ಕೋಟಿ ಬೋನಸ್ ಘೋಷಿಸಿದ 'ಅಮ್ಮ'

ರಾಜ್ಯ ಸರ್ಕಾರದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ (ಪಿ ಎಸ್ ಯು) ಸಿಬ್ಬಂದಿಗಳಿಗೆ ತಮಿಳು ನಾಡಿನ ಮುಖ್ಯಮಂತ್ರಿ ಬಂಪರ್ ಕೊಡುಗೆ ನೀಡಿದ್ದಾರೆ. 2015-16 ನೇ ಸಾಲಿಗೆ 476.71 ಕೋಟಿ
ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ತಮಿಳು ನಾಡು ಮುಖ್ಯಮಂತ್ರಿ ಜೆ ಜಯಲಲಿತಾ
ಚೆನ್ನೈ: ರಾಜ್ಯ ಸರ್ಕಾರದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳ (ಪಿ ಎಸ್ ಯು) ಸಿಬ್ಬಂದಿಗಳಿಗೆ ತಮಿಳು ನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಬಂಪರ್ ಕೊಡುಗೆ ನೀಡಿದ್ದಾರೆ. 2015-16 ನೇ ಸಾಲಿಗೆ 476.71 ಕೋಟಿ ಬೋನಸ್ ಘೋಷಿಸಿದ್ದು, 3,67,887 ನೌಕರರು ಕನಿಷ್ಠ 8400 ರೂ ನಿಂದ ಗರಿಷ್ಟ 16800 ರೂ ವರೆಗೆ ಬೋನಸ್ ಪಡೆಯಲಿದ್ದಾರೆ. 
"ಬೋನಸ್ ತಿದ್ದುಪಡಿ ಕಾಯ್ದೆ 2015 ರ ಅಡಿಯಲ್ಲಿ ಸಿ ಮತ್ತು ಡಿ ದರ್ಜೆ ನೌಕರರ ಬೋನಸ್ ಅರ್ಹತೆಯ ವೇತನ ಮಿತಿಯನ್ನು 10,000 ದಿಂದ 21,000 ರೂಗೆ ಏರಿಸಲಾಗಿದೆ. 21,000 ರೂ ವೇತನಕ್ಕೂ ಕೆಳಗೆ ಬರುವ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಬೋನಸ್ ನೀಡಲು ಆದೇಶಿಸಿದ್ದೇನೆ" ಎಂದು ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಲಾಭ ಮಾಡುತ್ತಿರುವ ಪಿ ಎಸ್ ಯು ಗಳ ಸಿಬ್ಬಂದಿ ಮತ್ತು ನೌಕರರಿಗೆ 20% ಬೋನಸ್ ನೀಡುವುದಾಗಿ ಅವರು ಹೇಳಿದ್ದಾರೆ. 
ನಷ್ಟದ ಪಿ ಎಸ್ ಯು ಗಳ ಸಿಬ್ಬಂದಿ ಮತ್ತು ನೌಕರರಿಗೆ 10% ಘೋಷಿಸಲಾಗಿದೆ. ತಮಿಳುನಾಡು ವಿದ್ಯುಚ್ಛಕ್ತಿ ನಿಗಮ, ರಾಜ್ಯ ಸರ್ಕಾರ ಒಡೆತನದ ಸಂಚಾರಿ ಸಂಸ್ಥೆಗಳು, ತಮಿಳು ನಾಡು ನಾಗರಿಕ ಸರಬರಾಜು ಸಂಸ್ಥೆ ಸಿಬ್ಬಂದಿ 20% ಬೋನಸ್ ಪಡೆಯಲಿದ್ದಾರೆ. 
ತಮಿಳು ನಾಡು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಿಬ್ಬಂದಿ 8.33% ಬೋನಸ್ ಪಡೆಯಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com