ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ನಂ.1 ಉನ್ನತ ಶಿಕ್ಷಣ ಸಂಸ್ಥೆ

ದೇಶದ ಟಾಪ್ 10 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲ ಸ್ಥಾನ ಪಡೆದಿದ್ದು,....
ಐಐಎಸ್ ಸಿ ಬೆಂಗಳೂರು
ಐಐಎಸ್ ಸಿ ಬೆಂಗಳೂರು
ನವದೆಹಲಿ: ದೇಶದ ಟಾಪ್ 10 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲ ಸ್ಥಾನ ಪಡೆದಿದ್ದು, ಪ್ರಬಂಧಕ ಸಂಸ್ಥೆಗಳ ಪೈಕಿ ಗುಜರಾತ್ ನ ಅಹಮದಾಬಾದ್ ಮೊದಲ ಸ್ಥಾನ ಪಡೆದಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೆಕರ್ ಅವರು ಬಿಡುಗಡೆ ಮಾಡಿರುವ ಟಾಪ್ 10 ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಏಳು ಐಐಟಿಗಳು ಸ್ಥಾನ ಪಡೆದಿದ್ದು, ಆ ಪೈಕಿ ಭಾರತೀಯ ವಿಜ್ಞಾನ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಇನ್ನು ಶ್ರೆಷ್ಠ ಕಾಲೇಜುಗಳ ಪಟ್ಟಿಯಲ್ಲಿ ದೆಹಲಿಯ ಮಿರಂದಾ ಹೌಸ್ ಮೊದಲ ಸ್ಥಾನ ಪಡೆದಿದೆ.
ಜಾವಡೆಕರ್ ಬಿಡುಗಡೆ ಮಾಡಿರುವ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ರಾಷ್ಟ್ರೀಯತೆ ಚರ್ಚೆ ಹಾಗೂ ಪ್ರತಿಭಟನೆಗಳ ಮೂಲಕ ದೇಶದ ಗಮನ ಸೆಳೆದಿದ್ದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ಎರಡನೇ ಸ್ಥಾನದಲ್ಲಿದೆ.
ಅತ್ಯುತ್ತಮ ವಿಶ್ವವಿದ್ಯಾಲಯಗಳು
1) ಐಐಎಸ್‌ಸಿ, ಬೆಂಗಳೂರು
2) ಜೆಎನ್‌ಯು, ನವದೆಹಲಿ
3) ಬಿಎಚ್‌ಯು, ವಾರಣಾಸಿ
ಅತ್ಯುತ್ತಮ ಕಾಲೇಜುಗಳು
1) ಮಿರಂದಾ ಹೌಸ್‌, ನವದೆಹಲಿ
2) ಲಾಯಲ್ ಕಾಲೇಜ್, ಚೆನ್ನೈ
3) ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌, ನವದೆಹಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com